ಹೋಗೋಣ ಬಾ ನನ್ನೊಲವಿನ ಊರಿಗೆ
ನನ್ನವಳ ಕಣ್ಸನ್ನೆಗೆ ಸೋತಿರುವೆ
ನೋಡಬಾರದೆ ನನ್ನೊಲವೆ
ಯಾರಿಲ್ಲದ ಊರಲ್ಲಿ
ಜೊತೆಗಾರನಾಗಿರುವೆ ನಾನಿಲ್ಲಿ
ನೋವಿನಲಿ ನಗುವಾಗುವೆ
ಕಷ್ಟದಲಿ ಹೆಗಲಾಗಿರುವೆ
ನೆರಳಾಗಿ ಹಿಂಬಾಲಿಸುಬೆ
ಪ್ರತಿಕ್ಷಣ ಜೊತೆ ಇರುವೆ
ದೂರದಲ್ಲಿದ್ದೆವು ನಾವು
ಪರಸ್ಪರ ಪ್ರೀತಿಯಲಿ ಒಂದಾದೆವು
ಬಿಟ್ಟಿರಲಾರೆ ಕ್ಷಣ ಕಾಲವು
ನೀನೆ ನನ್ನ ಜಗವು
ಕಾದಿದೆ ಹೃದಯವು ನಿನಗೆ
ನಾ ಬರುವೆ ನಿನ್ನ ಜೊತೆಗೆ
ಯಾರ ಹಂಗು ಬೇಡ ನಮಗೆ
ಹೋಗೋಣ ಬಾ ನನ್ನೊಲವಿನ ಊರಿಗೆ...
- Tanuja.K
18 Dec 2022, 07:48 am
Download App from Playstore: