ನಾವೆಲ್ಲರೂ ಒಂದೇ..

ಹಿಂದೂಗಳೇ
ದೇವಸ್ಥಾನಗಳ ಬಿಟ್ಟು ಬನ್ನಿ
ಮುಸ್ಲಿಮರೇ
ಮಸೀದಿಗಳ ಬಿಟ್ಟು ಬನ್ನಿ
ಕ್ರಿಶ್ಚಿಯನ್ನರೇ
ಚರ್ಚುಗಳ ಬಿಟ್ಟು ಬನ್ನಿ
ಎಲ್ಲರೂ ಒಂದಾಗಿ ಒಟ್ಟಾಗಿ ಭಾರತಾಂಬೆಯ ಆರಾಧಿಸೋಣ


ಎಲ್ಲರು ಉಸಿರಾಡುವ ಗಾಳಿಯೂ ಒಂದೇ
ಎಲ್ಲರು ಕುಡಿಯುವ ನೀರು ಒಂದೇ
ಎಲ್ಲರ ಮೇಲೆ ಬೀಳುವ ಸೂರ್ಯ ಕಿರಣ ಒಂದೇ
ನಾವೆಲ್ಲರೂ ಒಂದೇ
ಬನ್ನಿ ಭಾರತಾಂಬೆಯ ಆರಾಧಿಸೋಣ

ಎಲ್ಲರ ದೇಹದೊಳನ ರಕ್ತದ ಬಣ್ಣ ಒಂದೇ
ಹೋಡೆದಾಡಿದಾಗ ಉಂಟಾಗುವ ನೋವು ಒಂದೇ
ಸತ್ತಮೇಲೆ ಎಲ್ಲರೂ ಸೇರುವ ಜಾಗವೂ ಒಂದೇ
ನಾವೆಲ್ಲರೂ ಒಂದೇ
ಬನ್ನಿ ಭಾರತಾಂಬೆಯ ಆರಾಧಿಸೋಣ

ಜನನ ನಿಯಮ ಎಲ್ಲರಿಗೂ ಒಂದೇ
ಮರಣ ನಿಯಮ ಎಲ್ಲರಿಗೂ ಒಂದೇ
ಸೃಷ್ಟಿಯ ದೃಷ್ಟಿಯಲ್ಲಿ ಎಲ್ಲರೂ ಒಂದೇ
ನಾವೆಲ್ಲರೂ ಒಂದೇ
ಬನ್ನಿ ಭಾರತಾಂಬೆಯ ಆರಾಧಿಸೋಣ

ಹಿಂದೂಗಳೇ
ದೇವಸ್ಥಾನಗಳ ಬಿಟ್ಟು ಬನ್ನಿ
ಮುಸ್ಲಿಮರೇ
ಮಸೀದಿಗಳ ಬಿಟ್ಟು ಬನ್ನಿ
ಕ್ರಿಶ್ಚಿಯನ್ನರೇ
ಚರ್ಚುಗಳ ಬಿಟ್ಟು ಬನ್ನಿ
ಎಲ್ಲರೂ ಒಂದಾಗಿ ಒಟ್ಟಾಗಿ ಬದುಕೋಣ

ದೇಶಕ್ಕಾಗಿ ದುಡಿಯೋಣ
ದೇಶಕ್ಕಾಗಿ ಮಡಿಯೋಣ
ದೇಶ ಇರುವವರೆಗೂ
ದ್ವೇಶವ ಮರೆಯೋಣ

- ಚೇತನ್ ಬಿ ಸಿ

03 Aug 2016, 02:23 am
Download App from Playstore: