ಬೀಗಬೇಡ...
ಒಂಭತ್ತು ತಿಂಗಳು ಹೆತ್ತು ಹೊತ್ತೆ ಎಂದು ಬೀಗಬೇಡ..!
ಕಣ್ಣು ಬಿಡುವ ಮುಂಚೆಯೇ ಭ್ರೂಣ ಹತ್ಯೆ ಮಾಡಿದವರನ್ನು ನೋಡಿದ್ದೇನೆ..!
ನನ್ನ ಮಗ ದೊಡ್ಡ ಹುದ್ದೆಯಲ್ಲಿದ್ದಾನೆ ಎಂದು ಬೀಗಬೇಡ..!
ಸಾಕುವ ಅರ್ಹತೆ ಇಲ್ಲದ ಅನಾಥಾಶ್ರಮಕ್ಕೆ ಬಿಟ್ಟು ಬಂದದ್ದನ್ನು ನೋಡಿದ್ದೇನೆ..!
ನನ್ನ ಮಗಳು ಮನೆಯ ನಂದಾ ದೀಪ ಎಂದು ಬೀಗಬೇಡ..!
ಬೇರೆ ಮನೆಗೆ ಹೋಗಿ ಬೆಂಕಿ ಹಚ್ಚಿದ್ದನ್ನು ನೋಡಿದ್ದೇನೆ..!
ನನ್ನ ಸೊಸೆ ದೊಡ್ಡ ಶ್ರೀಮಂತರ ಮನೆಯವಳೆಂದು ಬೀಗಬೇಡ..!
ಅತ್ತೆ ಮಾವರಿಗೆ ಒಪ್ಪತ್ತು ಊಟ ಹಾಕದೇ, ಮೂಲೆಗೆ ನೂಕಿದವರನ್ನು ನೋಡಿದ್ದೇನೆ..!
ನನ್ನ ಅಳಿಯ ಲಕ್ಷ ದ ಅಧಿಪತಿ ಎಂದು ಬೀಗಬೇಡ..!
ನಿನ್ನ ಮಗಳನ್ನು "ಅಲಕ್ಷ್ಯ " ಮಾಡಿದ್ದನ್ನೂ ನೋಡಿದ್ದೇನೆ..!
ದೇವರು ನಾನು ಕೇಳಿದ್ದನ್ನೆಲ್ಲಾ ಕೊಟ್ಟಿದ್ದಾನೆಂದು ಬೀಗಬೇಡ..!
ಕೊಟ್ಟಿದ್ದೆಲ್ಲವನ್ನು ಕಿತ್ತುಕೊಂಡಿದ್ದನ್ನೂ ನೋಡಿದ್ದೇನೆ...
@GIRISH SHARMA TUMKUR@
- Girish Sharma Tumkur
29 Dec 2022, 04:47 pm
Download App from Playstore: