ವಾಸ್ತು..
ವಾಸ್ತು ವಾಸ್ತು ವಾಸ್ತು ಎಂದು ವಾಸ್ತವವನು ಮರೆತು, ಹಿರಿಯರು ಹರಸಿ ಕಟ್ಟಿದ ಮನೆಯನ್ನೂ
ಕೆಡುಹಿದೆ..!
ಹಣವಿಲ್ಲವೆಂದು ಕತ್ತೆ ಕುದುರೆಯಾ ಚಿತ್ರವಾ ಹಾಕಿದೆ..!
ಕೈ ಮುಗಿಯುತ್ತಾ ಮನೆಯಲ್ಲಿ ಸುಮ್ಮನೆ ಸೋಮಾರಿಯಾಗಿ ಕೂತೆ..!
ಅಣ್ಣ ತಮ್ಮರಾ ಪ್ರೀತಿ ವಾತ್ಸಲ್ಯವಾ ಮರೆತೇ..!
ಅಕ್ಕ ತಂಗಿಯರಾ ಮುದ್ದು ಮಮತೆಗೂ ಕೊರತೆ..!
ನವಮಾಸ ಹೊತ್ತು, ಜನ್ಮವಿತ್ತ ಅಮ್ಮನ ಉದರದಲ್ಲಿತ್ತೇ ವಾಸ್ತು..!
ಮೇಲೆ ಕೂರಿಸಿ ಲೋಕವಾ ತೋರಿದ ಅಪ್ಪನಾ ಹೆಗಲಿಗಿತ್ತಾ ವಾಸ್ತು..!
ಸತ್ತಾಗ ಸುಡುವ ಚಿತೆಯ ಅಗ್ನಿಗೆಲ್ಲಿ ವಾಸ್ತು..!
ಮಣ್ಣಲ್ಲಿ ಮುಚ್ಚುವರು ಕೇಳುವುದಿಲ್ಲಾ
ಭೂಮಿಯಾ ವಾಸ್ತು..!
ಆದರೂ ಮಾನವ ಸಂಬಂಧದಾ ಅನುರಾಗ ಮರೆತು, ಬಂಧದ ಮೋಹಕೆ ಸಿಲುಕಿ ಹುಡುಕವನು ಎಲ್ಲಿ ..?ವಾಸ್ತು ವಾಸ್ತು ವಾಸ್ತು...!
@GIRISH SHARMA TUMKUR @
- Girish Sharma Tumkur
30 Dec 2022, 08:44 pm
Download App from Playstore: