ಕವನಗಳ ಪ್ರೀತಿ ನಿನಗಾಗಿ

ನನ್ನ ಕವನದ ಪ್ರತಿ ಪದವು ನಿನ್ನ ಪ್ರೀತಿಸುವುದು
ಪ್ರತಿ ಸಾಲುಗಳು ನಿನ್ನ ನೆನಪಿಸುವುದು
ನಿನ್ನ ಮರೆಯಲು ಆಗದು ನನಗೆ
ಋಣವಿಲ್ಲ ಬದುಕಲು ಜೊತೆಗೆ

ಎಂದಾದರೊಂದು ದಿನ ಈ ಕವನ ಸೇರುವುದು ನಿನ್ನ ಕೈಗೆ
ಆ ನಂಬಿಕೆಯಲೆ ಕವನಗಳ ಬರೆಯುವೆ ಮತ್ತೆ ನಿನಗಾಗೆ
ಎಷ್ಟು ಕವನಗಳ ಬರೆಯಲಿ ನಿನಗಾಗಿ
ಮತ್ತಷ್ಟು ಸಂತೋಷ ಕೊಡುವುದು ತಾನಾಗಿ

ನಿನ್ನ ನೆನಪಲ್ಲೆ ಪ್ರತಿಕ್ಷಣವ ಕಳೆಯುವೆನು
ನಿನ್ನ ಗುಣಕಾಗಿ ಸೋತಿರುವೆನು
ಕಾಲವು ದೂರ ಮಾಡಿದರೇನು ನಮ್ಮನ್ನು
ಕವನದಲಿ ಮತ್ತಷ್ಟು ಸನಿಹ ನಾವಿನ್ನು...

- Tanuja.K

07 Jan 2023, 11:05 pm
Download App from Playstore: