ಒಮ್ಮೆ ಬರಬಾರದೆ...
ಈ ಹೃದಯದ ಬಡಿತ ನೀನು
ನನ್ನ ತನುವಿನ ಆತ್ಮ ನೀನು
ನನ್ನ ಉಸಿರಿಗೆ ಗಾಳಿ ನೀನು
ಎಷ್ಟು ಕಾಡಿಸಿದೆ ನಿನ್ನ
ಎಷ್ಟು ಕಾಯಿಸಿದೆ ನಿನ್ನ
ಆದರೂ ಹಠ ಬಿಡಲಿಲ್ಲ ನೀನು
ಕನಸೇ ಇಲ್ಲವೆಂದು ಬದುಕಿದ್ದೆ ನಾನು
ನನ್ನೊಳಗೆ ಮತ್ತೆ ಆಸೆ ಚಿಗುರಿಸಿದೆ ನೀನು
ಸಾವಿರ ಕನಸಿನ ಕೋಟೆಯೊಳಗೆ ನಿನ್ನನ್ನೆ ಕಂಡೆ ನಾನು
ಎದೆಯೊಳಗೆ ಬಚ್ಚಿಟ್ಟಿದ್ದ ಪ್ರೀತಿಯು ನೀನು
ಒಮ್ಮೆನಿನ್ನ ನೋಡುವ ಆಸೆಯಾಗಿದೆ ನನಗೆ
ದಯಮಾಡಿ ಬರಬಾರದೆ ಕಣ್ಣೆದುರಿಗೆ...
- Tanuja.K
12 Jan 2023, 10:14 pm
Download App from Playstore: