ಅತಿ ಆಸೆ ಗತಿ ಕೇಡು

ಒಂದಾನೊಂದು ಊರಿನಲ್ಲಿ ಸೀತಾ ಎನ್ನುವ ಹುಡುಗಿ ಇದ್ದಳು ಅವಳು ತುಂಬಾ ಗಾಳಿಗೋಪುರ ಕಟ್ಟುವ ಹುಡುಗಿಯಾಗಿದ್ದಳು ಒಂದು ದಿನ ಅವಳು ಸಂತೆಗೆ ಹೊರಟಿದ್ದಳು.
ಸೀತಾ: ಅಣ್ಣ ಒಂದು ಚೀಲ ಸೇಬು ಕೊಡಿ
ವ್ಯಾಪಾರಿ : ತೆಗೆದುಕೊಳ್ಳಿ
ಸೀತಾ : ಎಷ್ಟು ಹಣ
ವ್ಯಾಪಾರಿ :150₹
ಸೀತ : ಅಯ್ಯೋ 150 ರೂಪಾಯಿ .
ಮೊನ್ನೆ ಐವತ್ತು ರೂಪಾಯಿ ಇತ್ತಲ್ಲ.
ವ್ಯಾಪಾರಿ :ಹೌದಮ್ಮಾ ಈಗ ಸೇಬಿಗೆ ಜಾಸ್ತಿ ಬೆಲೆ
ಸೀತಾ : ಹಾಗಾದರೆ ತಿಳಿದುಕೊಳ್ಳಿ.
(ವಾಪಸ್ ಬರುವಾಗ ಮನಸ್ಸಿನಲ್ಲಿ :)
ಈಗ ಒಳ್ಳೆಯ ಕಾಲ ಎಲ್ಲಾ ಕಡೆ ಇರುವ ಸೇಬನ್ನು ನಾನು ಖರೀದಿಸಿ ಸ್ವಲ್ಪ ಸಮಯದ ನಂತರ ಅವುಗಳನ್ನು ಜಾಸ್ತಿ ಬೆಲೆಗೆ ಮಾರಿದರೆ ನಾನು ಬಹಳ ಬೇಗ ಶ್ರೀಮಂತಳಾಗುತ್ತೇನೆ.
ಅವಳು ಎಲ್ಲಾ ಸೇಬುಗಳನ್ನು ಕೊಳ್ಳಲು ತನ್ನ ಜಮೀನು ಮಾರಿದಳು. ತನ್ನ ಚಿನ್ನ ಮಾರಿದಳು. ನಂತರ ತನ್ನ ಮನೆಯ ದೊಡ್ಡ ಕೋಣೆ ತುಂಬ ಸೇಬು ತುಂಬಿದಳು.
ಸ್ವಲ್ಪ ಸಮಯದ ನಂತರ ಸೇಬಿನ ಬರಗಾಲ ಬಂದಿತು
ಆಗ ಇವಳು ಅವುಗಳನ್ನು ಮಾರಲೆಂದು ಕೋಣೆ ತೆಗೆದರೆ ಎಲ್ಲ ಸೇಬು ಹಣ್ಣುಗಳು ಕೊಳೆತು ನಾರುತ್ತಿದೆ
ಸೀತಾ ಎಲ್ಲ ಹಣ್ಣುಗಳನ್ನು ಸ್ವಚ್ಛ ಮಾಡುವ ಕೆಲಸವೂ
ಆಸ್ತಿ ಚಿನ್ನ ಎಲ್ಲ ಹಾಳಾಯಿತು. ಸೀತಾ ಅತ್ತಳು ಗೊಳಾಡಿದಳು ಆದರೇನು ಅತಿ ಆಸೆ ಗತಿ ಕೆಟ್ಟಿತು.

- Nisha anjum

13 Jan 2023, 08:38 pm
Download App from Playstore: