ಹೆತ್ತವರಿಗೆ ಹೆಗ್ಗಣ ಮುದ್ದು
ಒಂದಾನೊಂದು ಹಳ್ಳಿಯಲ್ಲಿ ದೇವಪ್ಪ ಮತ್ತು ರಾಜಮ್ಮ ಎಂಬ ದಂಪತಿಗಳು ಇದ್ದರೂ.ಅವಿರಿಗೆ ಸಂತಾನ ಭಾಗ್ಯ ಇರಲಿಲ್ಲ.ಇಬ್ಬರು ಹಗಲು ಕಷ್ಟಪಟ್ಟು ದುಡಿದು ರಾತ್ರಿ ದೇವರಿಗೆ ವಿಶೇಷ ಪೂಜೆ ಸಲ್ಲಿಸುತಿದ್ದರು.ಹೀಗೆ ಅವರ ಹಗಲು ರಾತ್ರಿಯ ಶ್ರಮದ ಫಲವಾಗಿ ಅವರಿಗೆ ಒಂದು ಗಂಡು ಮಗು ಜನಿಸಿತ್ತು.ಅದನ್ನು ಅವರು ತುಂಬಾ ಜೋಪಾನವಾಗಿ ಸಾಕಿದ್ದರು. ಅದಕ್ಕೆ ಕೃಷ್ಣ ಎಂದು ಹೆಸರಿಟ್ಟರು .ಮಗ ಕಲಿತು ಒಳ್ಳೆ ಮನುಷ್ಯ ಆಗಬೇಕು ಎಂದು ಆಸೇಪಟ್ಟರು.ಮಗ ಅವರ ಆಸೆಯಂತೆ ಕಲಿತು m.a ಮಾಡಿ ಒಳ್ಳೆ ಕೆಲಸ ಸೇರಿದ್ದ.
ಒಂದು ದಿನ ತಂದೆ ತಾಯಿ ಮಗನ ಮದುವೆ ಮಾಡಬೇಕೆಂದು ಯೋಚಿಸಿದರು.ಅವನನ್ನು ಊರಿಗೆ ಬರಲು ಪತ್ರ ಬರೆದರು. ಮಗ ತುಂಬಾ ಸಮಯದ ನಂತರ ಮನೆಗೆ ಬಂದ . ನೋಡಿದರೆ ಮಗ ಮೊದಲೇ ಮದುವೆ ಆಗಿದ್ದ.ಅದು ಹೆತ್ತವರನ್ನು ಕೇಳದೆ. ಇರಲಿ ಎಂದು ಮಗನನ್ನು ಸ್ವಾಗತಿಸಿದರು. ಕೃಷ್ಣ ಮಾರನೆಯ ದಿನ ಜಾಮೀನು ಮಾರಲು ಹೊರಟ .ಆದರೆ ತಂದೆ ತಾಯಿ ಇಬ್ಬರೂ ಒಪ್ಪಲಿಲ್ಲ . ಮಗ ಬೇಸರ ಮಾಡಿಕೊಂಡು ಹೊರಟ. ಸ್ವಲ್ಪ ಸಮಯದ ನಂತರ ತಂದೆ ಹಾಸಿಗೆ ಹಿಡಿದರು. ತಾಯಿ ಮಗನಿಗೆ ಫೋನ್ ಮಾಡಿ ವಿಷಯ ತಿಳಿಸಿದರು .ಆಗ ಮಗ "ಅಮ್ಮ ನೀನು ಅಪ್ಪ ಇಬ್ಬರುನು ಒಳ್ಳೆ ಆಶ್ರಮ ಸೇರಿ . ಹಣ ನಾನು ಕಳಿಸುತ್ತೇನೆ."ಎಂದ ಗತಿಇಲ್ಲದೆ ಆಶ್ರಮ ಸೇರಿದರು.ನಂತರ ತಂದೆ ಸತ್ತರು.ಅಮ್ಮ ಬರಲು ತಿಳಿಸಿದರು.ಆಗ ಮಗ ಹೇಳಿದ "ಅಮ್ಮ ಪುರೋಹಿತರನ್ನು ಕರೆಸಿ ಕಾರ್ಯ ಮಾಡಿಸು ಎಂದು " ಇದು ನಡೆದ ನಂತರ ಅಮ್ಮ ಹಾಸಿಗೆ ಹಿಡಿದರು ಮಗ ಓಡೋಡಿ ಬಂದ.ಅಮ್ಮ "ನನಗೆ ಗೊತ್ತಿತ್ತು ಕಂದ ನೀಬರುವಿ ಎಂದು ಗೊಟ್ಟಿತ್ತಪ್ಪ ಎಂದು ಅತ್ತರು.ಆದರೆ ಮಗ ಅಮ್ಮ ನಿಗೆ ಕೇಳಿದ ಒಂದೇ ಮಾತು ಅಮ್ಮ ಆಸ್ತಿ ಪತ್ರ ಎಲ್ಲಿದೆ.ಅಮ್ಮ ಹೃದಯ ಆಘಾತವಾಗಿ ಸತ್ತರು.ಮಗನನ್ನು ಎಲ್ಲ ಜನರು ಶಪಿಸಿದರು.
✍️ನಿಶಾ ಅಂಜುಮ್
- Nisha anjum
13 Jan 2023, 08:39 pm
Download App from Playstore: