ಅಯ್ಯೋ ವಿಧಿಯೇ....

ಒಳಗಂಡ ಅವನು
ಹೊರಗಂಡ ಇವನು
ಮನಸು ಬಯಸಿದುದು ಯಾರನು?
ಅವನ ಪ್ರೀತಿಸಿ ಇವನ ವರಿಸಿ
ನಾ ಪಡೆದೆ ಏನನು?

ಒಂದು ಎರೆಡು ಮೂರು ನಾಲ್ಕು
ದಿನ, ತಿಂಗಳು, ವರುಷಗಳ ಕಳೆದೆನು
ಮರೆಯಾದವೇ ಮನದಲ್ಲಿನ ಸವಿನೆನಪುಗಳು?
ಕಾಡದಿಹವೇ ನೀ ನನಗೆ ಕೊಟ್ಟ ಮುತ್ತುಗಳು?

ಯಾವ ಸುಖವ ಪಡೆಯಲು ನಾ ಹೀಗೆ ಮಾಡಿದೆನು?
ಯಾರನು ಮೆಚ್ಚಿಸಲು ನಾ ನಿನ್ನ ದೂಡಿದೆನು?
ಕಣ್ಣಂಚಲಿ ಮೂಡಿದ ಹನಿಗಳಿವು
ಎಂದು ಜಾರುವವು?

ಅಯ್ಯೋ ವಿಧಿಯೇ...
ಬೇಗ ಬಂದು ನನ್ನ ಕರೆದು ಹೊಗು...
ಘನ ಘೋರ ಈ ಜೀವನ...
ಸಾಕಾಗಿದೆ ಕಾಣದೇ ಮನದಿನಿಯನ...

- ಚೇತನ್ ಬಿ ಸಿ

06 Aug 2016, 09:30 pm
Download App from Playstore: