ನನ್ನಮ್ಮ
ನನ್ನಮ್ಮನ ಗರ್ಭಗುಡಿಯಲ್ಲಿ
ನಾ ಚಿಗುರುವ ಸುದ್ದಿ ತಿಳಿದು
ಸಂಭ್ರಮದ ಹೂವಿನಗೆಯ ಬೀರಿ
ನವಮಾಸ ಹೊತ್ತಳಂತೆ ನನ್ನಮ್ಮ.....
ಒಡಲೊಳಗಿನ ಕಂದಮ್ಮ ಸುಖವಾಗಿ ಬೆಳೆಯಲೆಂದು
ದೇವರ ನಾಮ ಸ್ತುತಿಸುತ್ತಾ ಭಕ್ತಿಯಿಂದ
ಭಜನೆ ಮಾಡಿದಳಂತೆ ನನ್ನಮ್ಮ ...
ಅತಿ ಶಬ್ದಕ್ಕೆ ನನ್ನ ಕಂದಮ್ಮ ಬೆಚ್ಚಿ ಬೀಳುವಳೆಂದು
ಅಂಜಿ ಪ್ರಶಾಂತ ಸ್ಥಳದಲ್ಲಿ ಕುಳಿತು
ಜೋಗುಳ ಹಾಡಿ ಮಲಗಿಸಿದಳಂತೆ ನನ್ನಮ್ಮ......
ನನ್ನ ಹೆತ್ತು ತನ್ನ ಮಡಿಲಲ್ಲಿ ಮಲಗಿರುವುದನ್ನು
ನೋಡಿ ತನ್ನ ನೋವನ್ನು ಮರೆತು
ಸಂಭ್ರಮಿಸಿದಳಂತೆ ನನ್ನಮ್ಮ......
ಜಯಾ ಪಿ ✍️
- Jaya
14 May 2023, 10:37 am
Download App from Playstore: