ಮಾತೇಪ್ರೇಮಮಯ
ಕರುಣೆಯ ಕಡಲೊಳಗೆ ಮುಳುಗಿಹೆನು ತಾಯೇ
ನಿನ್ನ ಕರಕಮಲದಿ ಆಸರೆಯ ಬೇಡಿಹೆನು ಕಾಯೇ
ಅಮ್ಮ ನೀ ಸುರಿದೆ ಮಮತೆಯ ಮಹಾಮಳೆಯನು
ಅನವರತ ಬತ್ತದ ಅಪರಿಮಿತ ಪ್ರೀತಿಯ ಝರಿಯನು
ಅನಂತ ಸಾಗರದ ಈಪರಿಯ ಮಾತೇಪ್ರೇಮಮಯ
ಎನಗಂತೇ ದೇವನೇ ಕಳುಹಿದ ಭುವಿಯ ಸುರಸಮಯ
ಸುಗುಣಶೀಲೆ ಮಾತೆ ಒಲವಿನ ಅಮೃತದ ಮುಗಿಲೇ
ಅಣು ಅಣುವಿನಲೂ ನಲಿವನೀವ ವರಸುರ ನವಿಲೇ
ಹಿರಿಯ ಪಾತ್ರ ಎನ್ನಏಳಿಗೆಯ ಸುರ ಸುಗಾತ್ರ
ಮರೆಯಲಾರೆ ಕರೆಯುತಿರುವೆ ಪರಮ ಸೂತ್ರ
_ಶಶಿಜಿತ್
- m Jithendra_ಶಶಿಜಿತ್
15 May 2023, 11:28 pm
Download App from Playstore: