ಮುಸ್ಸಂಜೆ
ಹಕ್ಕಿಗಳು ಮನೆಯೆಡೆಗೆ ಮುಖ ಮಾಡಿಹವು ನೋಡಲ್ಲಿ
ಹಾರುತಿವೆ ಬಾನಿನಲಿ ಕೆಂಬಣ್ಣವನು ಚೆಲ್ಲಿ
ಬೀಸುತಿದೆ ತಂಗಾಳಿ ಸುಮದ ಕಂಪಿನ ಜೊತೆಯಲ್ಲಿ
ಕಳೆದ್ಹೋಯಿತೆನ್ನಮನ ಸುಗಂಧದ ಸುಳಿಯಲ್ಲಿ
ಮುಗಿಲಂಗಳಕೆ ಹೋಳಿ ನಿತ್ಯ ಮುಸ್ಸಂಜೆಯಲಿ
ಮೋಡಗಳ ಮರೆಯಲ್ಲಿ ಇಣುಕುತಿಹನಾರಲ್ಲಿ
ಕೆಂಗಿರಣವ ತೂರಿಹನು ಪರ್ವತದ ಮುಡಿಯಲ್ಲಿ
ಹೇಮಪರ್ವತವೆಂಬ ಆಸೆಯನು ಚೆಲ್ಲಿ
ಅಡಗಿಹನು ತಾನ್ ಕಡಲಲ್ಲಿ
- Shekhar S gowda
17 May 2023, 05:48 pm
Download App from Playstore: