ದಶಕದ ನಂತರ ಮಾತಿಗೆ ಸಿಕ್ಕಿದ್

ದಶಕದ ನಂತರ ಮಾತಿಗೆ ಸಿಕ್ಕಿದ್ದ ಗೆಳತಿಗೆ..

ಅಂದು ಅರಳುತ್ತಿದ್ದವು,
ಎಳೆ ಬಳ್ಳಿಯಲಿ
ತಿಳಿಬಿಳಿ ಬಣ್ಣದ,
ಕೆಣ್ಣನ, ಹೊನ್ನನ
ಬಣ್ಣ ಬಣ್ಣದ
ಅಂದ-ಚಂದದ ಹೂವುಗಳು.
ಇಂದೂ...
ಅರಳುತ್ತವೆ,
ಆಗೊಮ್ಮೆ- ಈಗೊಮ್ಮೆ
ಅರಳಿ, ತಲೆಯೆತ್ತಿ
ಮತ್ಯಾರದೋ ಮರ್ಜಿ ನೋಡುತ್ತವೆ.
ಕಣ್ಣಳುಕಿಗೆ, ಮೂಗಳುಕಿಗೆ
ಮತ್ತೆ ಮುದುಡಿಬಿಡುತ್ತವೆ.
ಯಾಕಮ್ಮ ಗೆಳತಿ,

ಬಳ್ಳಿಯೊಡಲಲಿ
ಅರಳಿದ ಕುಸುಮಗಳೆಲ್ಲ
ನಿನ್ನ ದೈವಸನ್ನಿಧಿಗೆ ಮಾತ್ರವೇ!
ಭಾವಸನ್ನಿಧಿಗೆ...?

- 'ವಿಹ' ಪೂಜೇರ

10 Aug 2016, 02:18 am
Download App from Playstore: