ಕ ಕವನ

'ಕ'ಣ್ಮರೆಯಾದ ನಗುವಿನ ಹಿಂದೆ
'ಕಾ'ಣದ ನೋವಿದೆ
'ಕಿ'ತ್ತು ತಿನ್ನುವ
'ಕೀ'ಚಕರ ವರ್ತನೆಗೂ
'ಕು'ಸಿದುಬಿದ್ದ ಬದುಕಿದೆ
'ಕೂ'ಗಿ ಕರೆದಾಗ
'ಕೃ'ತಕ ಭಾವನೆಗಳು ಸ್ಪಂದಿಸದೆ
'ಕೆ'ಣಕಿದ ಮನಸುಗಳಿಗೆ
'ಕೇ'ವಲ ಜೀವವಿದೆ
'ಕೈ' ಹಿಡಿವ ಹಂಬಲಕೆ
'ಕೊ'ಡು ತಾಯೆ ವರವೊಂದ
'ಕೋ'ರುವೆ ಭಕ್ತಿಯಲಿ
'ಕೌ'ತುಕ ಜೀವನದಲಿ
'ಕಂ'ಬನಿಗಳ ಸಾರದೊಂದಿಗೆ
'ಕಃ' ಎಂಬ ಉದ್ಗಾರದೊಂದಿಗೆ.

ಕೊನೆಯಾಯಿತು ನೋವು ತುಂಬಿದ "ಕ-ಕಃ"ಬದುಕಿನ ಪಯಣ!!!

- ಸಾಗರ್ ಸಿದ್ದು

10 Aug 2016, 01:12 pm
Download App from Playstore: