ಸ್ವಾತಂತ್ರ್ಯ ದಿನ...
ಶಾಂತಿದಾತ ಗಾಂಧಿತಾತ ಜನಿಸಿದ ಪುಣ್ಯ ಭೂಮಿಯವರು ನಾವು ಭಾರತೀಯರು
ಕ್ರಾಂತಿ ವೀರ ಭಗತಸಿಂಹ ಚಂದ್ರಶೇಖರರ ತವರಿನ ಸಿರಿವಂತರು ನಾವು
ಹಿಂದು ಮುಸ್ಲಿಮ ಕ್ರೈಸ್ತರೆಲ್ಲರನು ಸಮ್ಮತಿಯಿಂದ ಕಾಣುವ ಸಹಿಶ್ನು ಭಾರತೀಯರು
ಸಹಾಯ ಹಸ್ತದಿಂದ ಬಂದ ಎಲ್ಲರನೂ ಸಂತೈಸಿದ ವಿಶಾಲ ಹ್ರುದಯದವರು ನಾವು
ಕಾರ್ಗಿಲ್ ಎಂಬ ರಣರಂಗವ ಭೇದಿಸಿ ವಿಜಯ ಪತಾಕೆ ಹಾರಿಸಿರುವ ಭಾರತೀಯರು
ಇಬ್ಬರು ನರೇಂದ್ರರನ್ನು ಜಗತ್ತಿಗೆ ಕೊಡುಗೆಯಾಗಿ ನೀಡಿದ ಭಾರತಾಂಬೆಯ ಪಾದದಲ್ಲಿರುವೆವು ನಾವು
ವಿಶ್ವಶಾಂತಿಯ ಮಂತ್ರ ಸಾರಿ ಶತ್ರುಗಳನ್ನು ಮಿತ್ರರಂತೆ ಪ್ರೀತಿಸುವ ಮನಸವರು ಭಾರತೀಯರು
ಜಗತ್ತಿನ ಹಿರಿಯಣ್ಣನ್ನೇ ನಮ್ಮ ಸ್ನೇಹ ಬೆಳೆಸುವಂತೆ ಬೆಳೆದು ನಿಂತಿಹೆವು ನಾವು
ಚೈನಾ ದೇಶವು ಹೆದರಿ ಭಯದಿಂದ ಜೀವಿಸುತ್ತಿರುವ ಸ್ಥಿತಿ ತಂದಿರುವ ಸೇನೆಯವರು ನಾವು ಭಾರತೀಯ ರು
ಭೂ ಜಲ ವಾಯು ಸೇನೆಯಲ್ಲಿ ಬಲಿಷ್ಟ ಶಕ್ತಿಯನ್ನು ಹೊಂದಿರುವ ಹೆಮ್ಮೆಯ ಪುತ್ರರು ನಾವು
ವಿಜ್ಞಾನ ತಂತ್ರಜ್ಞಾನ ಕ್ಷೇತ್ರದಲ್ಲಿ ಮೇರು ಸಾಧನೆಯನ್ನು ಮಾಡಿ ವಿಶ್ವಕ್ಕೆ ಮಾದರಿಯಾದ ಭಾರತೀಯರು
ಒಂದಲ್ಲ ಎರಡಲ್ಲ ಬಹುಜನ್ಮದ ಪುಣ್ಯ ಇಲ್ಲಿ ಜನಿಸಲು ನಾವು
ತುಂಬಾ ಧೈರ್ಯದಿಂದ ಕೆಚ್ಚೆದೆಯಿಂದ ಸಿಡಿಗುಂಡಿಗೆಯ ಧೈರ್ಯದಿಂದ ಹೇಳುವೆವು ನಾವು ಭಾರತೀಯರು.
ಜೈ ಹಿಂದ್
- Rahul marali
13 Aug 2016, 07:26 pm
Download App from Playstore: