ನಲ್ಮೆ

ಒಲವು ಮೌನವಾಗಿ ಮನವ ಸೇರಿದೆ...
ಸರಿ ತಪ್ಪು ತಿಳಿಯದಾಗಿದೆ...
ಎಂದೋ ಕಾದಿದ್ದ ದಿನಾವಿಂದು ಕಣ್ಣೆದುರು
ಬಂದಂತಾಗಿದೆ..
ಒಪ್ಪಿಗೆಯ ಸೂಚಿಸಲೇ...?
ಅಪ್ಪುಗೆಯಲಿ ಬಂಧಿಯಾಗಿಬಿಡಲೇ...?
ಪ್ರೀತಿಯಲಿ ಈ ಸೆಳೆತವೇಕೊ ಕಾಡಿಹುದು..
ನೀ ಜೊತೆ ಇದ್ದರೆ ಕಹಿಯೂ ಸಿಹಿಯಾಗುವುದು..
ತಿಳಿದು ತಿಳಿಯದ ನಲ್ಮೆ ನಿನ್ನದು..
ಬೇಕಿದ್ದೂ ಬೇಡವೆಂದ ಹೃದಯ ನನ್ನದು...

✍️ತನುಮನಸು

- Tanuja.K

28 Sep 2023, 05:43 am
Download App from Playstore: