* ಅವನೊಂಥರಾ

ಆಕಾಶದಲ್ಲಿರೋ ಸಾವಿರಾರು ನಕ್ಷತ್ರಗಳ ನಡುವೆ ಇರೋ ಧ್ರುವತಾರೆ ಇದ್ದಂಗೆ.....
ಹುಣ್ಣಿಮೆಯ ಕಡುರಾತ್ರಿಯಲಿ ಹೊಳೆಯೊ ಚಂದಮಾಮ ಇದ್ದಂಗೆ.....
ವೃತ್ತಿಯಲ್ಲಿ ದೇಶ ಕಾಯೋ ಸೈನಿಕ ಆದ್ರೂ ಸಹ ನನ್ನ ಹೃದಯ ಆಳುವ ಮಹಾರಾಜ ಇದ್ದಂಗೆ....
ಕನ್ನಡಿಯಲ್ಲಿ ನನ್ನ ನೋಡಿಕೊಳ್ಳೋ ಪರಿವೆ ಇಲ್ಲ ಅವನು ನನ್ನ ಪ್ರತಿಬಿಂಬ ಇದ್ದಂಗೆ.....
ನೋವಲ್ಲಿದ್ದಾಗ ನನ್ನ ನಗಿಸೋ joker ಇದ್ದಂಗೆ.....
ಯಾವಾಗಲು ನನ್ನ ಕಾಯೋ unpaid bodyguard ಇದ್ದಂಗೆ.....
ಎಷ್ಟೇ ಕಷ್ಟ ಕೊಟ್ರು ನನ್ನ ಬಿಟ್ಟ ಹೋಗ್ದೇ ಇರೋ ಬೆನ್ನಿಗೆ ಬಿದ್ದ ಬೇತಾಳನಂಗೆ.....
ಹೃದಯಕಂಟಿ ಕೊಂಡಿರೋ ಬಿಡಿಸಲಾಗದ ಜಿಗಣೆ ಹಂಗೆ......
ಸಿಟ್ಟದಾಗ ಹೆಡೆಯೆತ್ತಿ ಬುಸುಗುಟ್ಟೋ ಹಾವಿನಂಗೆ....
ಮಗು ತಪ್ಪು ಮಾಡಿದಾಗ ತಿದ್ದಿ ಹೇಳೋ ತಾಯಿ ಇದ್ದಂಗೆ.....
ಜೀವನ ಪೂರ್ತಿ ಜೊತೆಗೆ ಇರ್ತಿನಿ ಅನ್ನೋ ಒಂದೇ ಒಂದು ಜೀವ ಅವನು,ನನ್ನ ಜೀವ ಇದ್ದಂಗೆ....

- shaila yalashetti

07 Oct 2023, 11:57 pm
Download App from Playstore: