ಹುಟ್ಟುಹಬ್ಬ
ಮನವೆಂಬ ಮಂದಿರದಲ್ಲಿ ಬೆಳಗಿದ ಪ್ರೀತಿಯ ದೀಪ ನೀನು
ಹೃದಯವೆಂಬ ಸಮುದ್ರದಲ್ಲಿ ಒಡನಾಡಿಯಾದ ಸೋದರಿ ನೀನು |
ನನ್ನ ಒಂದೊಂದು ಏಳಿಗೆಯಲ್ಲಿ ನಿನ್ನ ಪಾತ್ರ ಹಿರಿದು
ನಿನ್ನಂತಹ ಸೋದರಿಯ ಪಡೆದ ಭಾಗ್ಯ ಎನದು ||
ನಿನ್ನ ಜನುಮದಿನದ ಈ ಶುಭವೇಳೆ
ನಿನ್ನ ಮನಸಲ್ಲಿ ನಾನಿರುವೆನೋ ಇಲ್ಲವೋ
ನನಗೆ ತಿಳಿದಿಲ್ಲ ಬೇಸರವೂ ಇಲ್ಲ
ಕೋರುವೆನು ಪರಿಶುದ್ಧ ಪ್ರೀತಿಯ ಶುಭಾಶಯ||
ಕಣ್ಣಿಗೆ ದೂರವಿದ್ದರೂ
ಹೃದಯದೊಳಗಿನ ನಿನ್ನ ಸನಿಧ್ಯವನು ಸವಿಯುತಿತ್ತು ನನ್ನ ಈ ಮನವು
ನಿನ್ನ ಜನುಮದಿನಕಿದೋ
ಕೋರುವೆನು ಮನದಾಳದ ಪ್ರೀತಿಯ ಶುಭಾಶಯ ||
- anup
16 Aug 2016, 10:46 pm
Download App from Playstore: