ಸಾಹಿತಿ
ಮನದ ಮೂಲೆಯಲ್ಲೋಬ್ಬ ಸಾಹಿತಿ
ಕೈಯಲ್ಲೋಂದು ಲೇಖನಿ ಹಿಡಿದು
ಗೀಚುತ್ತಿದ್ದಾನೆ ತೊಚಿದ ಪದಗಳ
ಅಲ್ಲೋ ಇಲ್ಲೋ ದೋಚಿದ ಪದಗಳ
ಕಣ್ಣಿಗೆ ಕಟ್ಟಿದ ಹಾಗೆ ಕಲ್ಪನೆ ಮಾಡಿ
ಎಲ್ಲರು ಮೆಚ್ಚುವ ರೀತಿ ಬಣ್ಣನೆ ನೀಡಿ
ಒಳಾರ್ಥಗಳಿಂದ ಓದುಗರಿಗೆ
ಮಧುವ ಸುರಿದು
ಗೀಚುತ್ತಿದ್ದಾನೆ ತೊಚಿದ ಪದಗಳ
ಅಲ್ಲೋ ಇಲ್ಲೋ ದೋಚಿದ ಪದಗಳ
ಬದುಕಿನ ಜೊತೆಗೆ ಒಲವನು ಇರಿಸಿ
ಒಲವಿನ ಜೊತೆಗೆ ಸಿಹಿ ಕಹಿಯನು ಉಣಿಸಿ
ತನ್ನನ್ನು ಮರೆತು ಎಲ್ಲರಲ್ಲಿಯು ಬೆರೆತು
ಗೀಚುತ್ತಿದ್ದಾನೆ ತೊಚಿದ ಪದಗಳ
ಅಲ್ಲೋ ಇಲ್ಲೋ ದೋಚಿದ ಪದಗಳ
ಸಾಹಿತಿ ಲೇಖನಿಯ ಸಾರಥಿ
ಸಾಹಿತಿ ಭಾವನೆಗಳ ಅಧಿಪತಿ
- ಆನಂದ್
18 Aug 2016, 07:36 am
Download App from Playstore: