ಆಸೆ
ಆಸೆ
ಇಳಿಗೆ ಮಳೆಯ ಆಸೆ
ಮಳೆಗೆ ಮೋಡದಾಸೆ
ಮೋಡಕ್ಕೆ ಆವಿಯ ಆಸೆ
ಆವಿಗೆ ಸಮುದ್ರದ ಆಸೆ
ಸಮುದ್ರಕ್ಕೆ ಮಂಜಿನ ಆಸೆ
ಮಂಜಿಗೆ ಗಾಳಿಯ ಆಸೆ
ಗಾಳಿಗೆ ಮರದಾಸೆ
ಮರಕ್ಕೆ ಕೋಗಿಲೆ ಆಸೆ
ಕೋಗಿಲಿಗೆ ವಸಂತ ದಾಸೆ
ವಸಂತಕ್ಕೆ ತುಂತುರು ಹನಿಗಳ ಆಸೆ
ತುಂತುರು ಹನಿಗೆ ಕಾಮನಬಿಲ್ಲಿನ ಆಸೆ
ಕಾಮನಬಿಲ್ಲಿಗೆ ಬಿಂಬದ ಆಸೆ
ಬಿಂಬಕ್ಕೆ ಮೂಲದ ಆಸೆ
ಮೂಲಕ್ಕೆ ಜ್ಞಾನದಾಸೆ
ಜ್ಞಾನಕ್ಕೆ ಆಳದ ಆಸೆ
ಆಳಕ್ಕೆ ಅನುಭವದಾಸೆ
ಅನುಭವಕ್ಕೆ ಅನುಭಾವದಾಸೆ
-ಕಾವ್ಯಪ್ರೀಯ
- ಶಹಾಬುದ್ದೀನ್ ಕೆ. (ಕಾವ್ಯಪ್ರೀಯ)
30 Sep 2024, 09:02 am
Download App from Playstore: