ವಾಸ್ತವ
ನಿಷ್ಕಲ್ಮಷ ಪ್ರೀತಿಗೆ ಸೋಲದವರಿಲ್ಲ
ಸೋತವರೆಲ್ಲ ಬದುಕಲ್ಲಿ ಜಯ ಗಳಿಸಿದರಲ್ಲ.
ದ್ರೋಹ ಬಗೆದವರೆಲ್ಲ ಬೆದರಿದರಲ್ಲ.
ಮೆರೆದವರೆಲ್ಲ ಒಂದಿನ ಮಣ್ಣಾಗಲೇಬೇಕಲ್ಲ.
ನಂಬಿ ನಡೆದರೆ ಕೆಟ್ಟವರಿಲ್ಲ
ಕೆಟ್ಟವರಿಗೆ ಉಳಿಗಾಲವಿಲ್ಲ
ಉಳಿದವರೆಲ್ಲ ಮಣ್ಣಾಗಲೇಬೇಕಲ್ಲ
ಮಣ್ಣಲ್ಲಿ ಮಣ್ಣಾಗಿ, ಆತ್ಮವಾಗಿ
ಪರಮಾತ್ಮನ ಪಾದ ಸೇರಲೇಬೇಕಲ್ಲ
ಪರಮಾತ್ಮನಿಗೆ ತಲೆಬಾಗಲೇಬೇಕಲ್ಲ.
- ಶ್ರದ್ಧಾ ಹಂಡಿಗಿ✍️
- Shraddha H
02 Oct 2024, 07:47 pm
Download App from Playstore: