ರಸಭಾವ....

ಭೂರಮೆ ನಲಿದಾಡಿದಳು
ಇಬ್ಬನಿಯ ನಸುಬೆಳಕಿನಲಿ
ಈ ಪ್ರಕೃತಿಯ ಸೊಬಗಿನ ತಾಣದಿ
ಒಂಚೂರು ವಿಹರಿಸುವ ಬಾ ಸಖಾ.....
ಸಹ್ಯಾದ್ರಿಯ ಮಡಿಲಲ್ಲಿ
ಮಗುವಂತೆ ನಿದ್ರಿಸುವ
ಹರಿಯುವ ಸುಧೆಯ ತೀರದಲ್ಲೊಮ್ಮೆ
ಒಡಲ ಬೇಗುದಿಯನ್ನು ಹರಿಯ ಬಿಡುವ...
ಪಚ್ಚೆಲೆಗಳ ಮೈ ಮೇಲಿರುವ
ಹನಿಗಳ ಸ್ಪರ್ಶಿಸಿ ಪ್ರೇಮಾನುಭವವ
ಪಡೆಯುವ ಬಾ ಸಖಾ...
ಪ್ರಕೃತಿ ಮಾತೆ ಎಂಬ ಅದಮ್ಯ ಪ್ರೇಮಿಯ
ಮುಂದೆ ನಾವು ತೃಣ ಗಾತ್ರದ ಹುಲ್ಲೆಂದು
ಅರಿತು ನೋವ ಮರೆತು
ಕ್ಷಣಿಕ ಕಾಯ ನಾವೆಂಬ ಭಾವ ತಳೆದು
ರಸಭಾವದಲಿ ಒಂದಾಗುವ......

- ಅನಾಮಿ-K

26 Oct 2024, 07:21 am
Download App from Playstore: