ಸತ್ತಿದ್ದ.....
ಕತ್ತಲೆಯ ಮೌನದಲಿ ಸೀಳಿ ಹೋದವನ ಮುಂದೆ ಗದ್ದಲು - ಅರಚಾಟ
ಬೆತ್ತಲೆ ಸಂತೆಗಿಳಿದು ಧಾರಣೆಗಳ
ಹೋಯ್ದಾಟದೊಂದಿಗೆ ಸಿಗುವ - ಸಿಗದ ಪದಾರ್ಥಗಳಿಗೆಲ್ಲ ಕೈ ಹಾಕಿದವ
ಸತ್ತ ನಂತರ ಕಿವಿಗಳಿದ್ದರೆ ಇದ್ದವರ ಎರಡೆರಡು ಮುಖ ಧ್ವನಿ ಕೇಳ್ತಿದ್ದ.
ಕಣ್ಣಿದ್ದರೆ ಹರಿವ ಕಣ್ಣೀರಲಿ ತನ್ನ ಸಾರ್ಥಕತೆ ಕಾಣ್ತಿದ್ದ.
ಮೂಲೆಯಲಿ ಎಲೆಯಾಟವಾಡುವ ಪುಂಡರ, ಸಾರಾಯಿ ನಶೆಯಲಿ ಅಲೆದಾಡುವ ಪರಿಚಿತರ ,ಮೌನದಿ ರೋಧಿಸುವ ಗೆಳೆಯರ, ಅತ್ತು ಹೈರಾಣದ ಪ್ರೀತಿ ಪಾತ್ರರ ಬೆಲೆ ತಾ ತಿಳೀತಿದ್ದ ಸತ್ತರೂ ಅಲ್ಲಿದ್ದಲ್ಲಿ.
ಅರಿವಿಲ್ಲದೆಯೇ ಒಳಗೆ ಎಂದಿನಿಂದಲೋ ಸಿಕ್ಕಿಕೊಂಡಿರುವ ಗಾಳಿಗೆ ಬಿಡುಗಡೆ ನೀಡುತಲೇ ಇಲ್ಲವಾದವ, ಉಪಕಾರಿ.
ಸಾಯಲು ಸಾಲುಗಟ್ಟಿ ನಿಂತವರಲ್ಲಿ ತನ್ನ ಪಾಳಿಯೊಂದಿಗೆ ನಿರ್ಗಮಿಸಿದವನ ನೆನೆಯಲು ಇಷ್ಟು ಜನ, ಇಷ್ಟೊಂದು ಒಡೆದ ಮೌನ?
ಐಂದ್ರೇಯ (ಮಹೇಶ).
- MaheshRK
20 Aug 2016, 10:57 am
Download App from Playstore: