ದೇವಕುಸುಮ
ನೀ ನಕ್ಕರೆ ಹಾಲೇ ಉಕ್ಕುವ ಸುರಭಿ
ನೀ ನುಡಿದರೆ ಕಲ್ಲುಸಕ್ಕರೆಯ ಸೌರಭ
ನೀ ನಡೆದರೂ ಅರಳುವ ಪಾರಿಜಾತ
ನಿನ್ನ ಮೊಗವು ಅರಳುವ ದೇವಕುಸುಮವು
ನಿನ್ನ ಕಣ್ಗಳ ನೋಟದಲಿ ವಿಶ್ವರೂಪವು
ನಿನ್ನ ಶುಷ್ಕ ಚೆಲುವಿನ ಒಲವು ಮಂದಾರ ಹೂ
ಯಾವ ದೇವ ಸೃಷ್ಟಿಸಿದ ನಿನ್ನ ರೂಪವ
ಆ ನಿನ್ನ ಕಿಲಕಿಲ ನಗುವಿನ ಕಲರವ ಭಾವ
ಬ್ರಹ್ಮ ಕಡೆದ ನಿನ್ನ ಹಾಲುಗಲ್ಲದ ಗುಳಿಗುಂಡಿ
ನಿನ್ನ ಭಾವ ನಿನ್ನ ಹಾವ ನಿನ್ನ ಹೆಜ್ಜೆ ನಿನ್ಮ ಲಜ್ಜೆ
ನೀ ನಡೆದರೂ ಅತ್ತರೂ ಆ ನಗುವಿನ ಸುಹಾಸದ
ಓ ಮಗುವೇ ನನ್ನ ದೃಷ್ಟಿ ತಾಕದಿರಲಿ ನಿನ್ನ ಸೃಷ್ಟಿಗೆ
*********** ದೇವಕುಸುಮ*************
------------------------
- ಕವಿಕೂಸು
07 Jan 2025, 10:33 pm
Download App from Playstore: