ನೀನಾ.....
ಗೆಳೆತನಕೊಂದು ಹೊಸತನ ತಂದು
ನವಭಾವಗಳ ಬೆಸೆಯಲು ಬಂದ
ಗೆಳತಿಯು ನೀನಾ.....
ಸ್ವಪ್ನದ ಸಾಲಲಿ
ನೆನಪಿನ ನೆಪದಲಿ
ಉಸಿರನು ಕೂಡಿಸಿ
ಹುಣ್ಣಿಮೆ ಚೆಲ್ಲಿದ ಚಂದ್ರಿಕೆ ನೀನಾ.......
ಮನಸಿನ ಮಾಹಿತಿ
ದಿನವಿಡಿ ಪಡೆಯುತ
ಮರೆಯದ ಸಂಭ್ರಮ
ಕೊಡುಗೆ ನೀಡಿದ ಕನ್ನಿಕೆ ನೀನಾ.......
ಭುವಿಯಲಿ ಜಾರಿದ
ಹನಿಹನಿ ಮಳೆಯನು
ಸರದಲಿ ಪೋಣಿಸಿ
ಮಾಲೆಯ ಕಟ್ಟಿದ ಸಾಹಸಿ ನೀನಾ......
ಒಲವಿನ ಕಾವ್ಯವ
ರಚಿಸುವ ಕಲೆಯನು
ಬೆಳೆಸುತ ನನ್ನಲಿ
ಭಾವನೆ ತುಂಬಿದ ಮಾನಸಿ ನೀನಾ.......
- ಆನಂದ್
21 Aug 2016, 09:41 pm
Download App from Playstore: