ಬೆಳಕು

ಬರುವುದಾದರೆ ಬಾ ಬೆಳಕೆ ಮನೆಗೆ
ತುಂಬಿಬಿಡು ಬಂದು ಮನಕೆ

ಕತ್ತಲಿನ ಭಯವ
ಕತ್ತಲಲೆ ಕಳೆದು
ಮತ್ತೆ ಹೊತ್ತಗೆಯ
ಜ್ಞಾನವನೆ ಮುಡಿದು
ಕಾಳರಾತ್ರಿಯ ಕೆಟ್ಟ ನೋವಿನ ನೆನಪು
ಭಿತ್ತಿಯಲಿ ಚಿತ್ರಿಸಿದ ಋಣವನ್ನು ಸುಟ್ಟು
ಮಂತ್ರದ ಜ್ಞಾನರಸ ತಂತ್ರದ ಗಾಯತ್ರಿನೀನು

ಕತ್ತಲಿನ ನಶೆಯಿಂದ ಎತ್ತರಕೆ ಬೆಳೆದ ದಿಡ್ಡೆಗಳನೊಡೆದು
ಸತ್ತವನ ಸತ್ಯವನು ಮರೆತು
ಬೆಳೆದ ಕಳೆಯನು ಕಿತ್ತು

ತತ್ತರಿಸುವ ನನ್ನ ಮನದ ಭಯವ ತರಿದು

ಇಳಿದು ಬಾ ನನ್ನ ಹೃದಯಕೆ ಓ ಜೀವ ಬೆಳಕೆ.

- Sandeep Vishwas

21 Aug 2016, 10:02 pm
Download App from Playstore: