ಜೀವನ ಸಾಕ್ಷಾತ್ಕಾರ
ಎಲ್ಲಿಂದಲೋ ಬಂದೆವು ನಾವು
ಎಲ್ಲಿಗೋ ಹೋಗುವೆವು ನಾವು
ಚಿಂತಿಸದೇ ಕುಳಿತಿರುವೆವು
ಎಂದಾಗಿರಬಹುದು ನಮ್ಮ ಸಾವು...
ಎದುರಾಗುತ್ತಿದೆ ಸಾವಿರಾರು ನೋವು..
ಜೀವನವಾಗಿದೆ ಕಹಿ ಬೇವು
ಎದ್ದು ನಿಲ್ಲಬೇಕಾಗಿದೆ ನಾವು
ಜೀವನವನ್ನು ಮಾಡೋಣ ಸಿಹಿ ಮಾವು..
ಅನುಗ್ರಹಗಳನ್ನು ನೀಡಿದ ದೇವರು
ನಮಗದರ ನೆನಪೇ ಇಲ್ಲ..
ಬೀಗುತ್ತಿರುವೆವು ನಮ್ಮದೇ ಎಲ್ಲ..
ಹಂಚಿ ತಿನ್ನುವ ಪರಿವೆಯೇ ಇಲ್ಲ...
ತುಂಬಿಕೊಂಡಿದೆ ಮನದಲ್ಲಿ ಅಹಂಕಾರ
ಬಡವ-ನಿರ್ಗತಿಕರಲ್ಲಿ ತೀವ್ರ ತಿರಸ್ಕಾರ
ಬೆಳೆದವರ ನೆನೆದು ಮತ್ಸರ
ಮಾಡುತ್ತಿರುವೆವು ಅವರನ್ನು ಅಪಪ್ರಚಾರ
ಮಾಡುತ್ತಲಿರುವೆವು ಉತ್ತಮ ಸಾಧನೆ
ನೀಡುತ್ತಲಿರುವೆವು ಇತರರಿಗೆ ಬೋಧನೆ
ಮಾಡಲಾರೆವು ಅಸಹಾಯಕರ ಪಾಲನೆ
ಆಗಿದೆ ಇಲ್ಲಿ ಮಾನವೀಯತೆಯ ಧೋರಣೆ
ಗುರುಹಿರಿಯರಿಗೆ ಗೌರವ
ಸಮಾನರಿಗೆ ಸ್ನೇಹದ ಮಧುರ
ಚಿಕ್ಕವರಿಗೆ ಕರುಣೆಯ ಸಹಕಾರ
ನೀಡುತದತ್ತಾ ಮಾಡೋಣ ಜೀವನ ಸಾಕ್ಷಾತ್ಕಾರ
ಬೇಡ ನಮ್ಮಲ್ಲಿ ಅಸೂಯೆ
ಮುಖದಲ್ಲಿ ಕೋಪದ ಛಾಯೆ
ನಗುಮುಖ ಇರಲಿ......
ಕರುಣೆ ಪ್ರೀತಿ ತುಂಬಿರಲಿ.....
- AsiddeeqN
22 Aug 2016, 11:37 pm
Download App from Playstore: