ಮೋಡದಾ ಮೇಲೆ

ಮೋಡದಾ ಮೇಲೆ
ಪ್ರೀತಿಯಾ ತಾರೆ!!
ಕಾಲನು ತೂಗಿ
ಆಡುವಾ ಬಾರೆ!!

ನಕ್ಕರೆ ಹೂವಿನಾ ಮಳೆಯೋ
ಅತ್ತರೆ ಒಲವಿನಾ ಸಿರಿಯೋ!!
ನೆನೆದರೆ ಇಬ್ಬರಿಗೂಚಳಿಯೋ
ವಲಿದರೆ ಹೊನ್ನಿನಾ ಸಿರಿಯು!!

ವಿರಹವು ದೂರಕೆ ಸರಿದಿರಲು
ಸನಿಹದ ಬಯಕೆಯು ಬೆಸೆದಿರಲು!!
ಗೆಳೆತನ ನೆಮ್ಮದಿಯ ತರಲು
ಸಲುಗೆಯು ಒಮ್ಮತವಾಗಿಹುದು!!

ತಿರುಗುವ ಜೀವನ ಚಕ್ರದಲಿ
ಹಾಡಿದ ಪ್ರೀತಿಯ ಹಾಡು ಇದು!!
ಕರಗುವ ಮಂಜಿನ ವೇಗದಲಿ
ಮುಗಿಯಿತು ಕನಸಿನ ಹಾಡುಗಳು!!

- ಪಿ.ಜಿ.ಜ್ಯೋತಿ

23 Aug 2016, 03:44 pm
Download App from Playstore: