ಪ್ರಣಯ ಗೀತೆ
ಪ್ರೀತಿ ತುಂಬು ವೇಳೆ
ಆ ಚಂದ್ರ ಬಂದ ವೇಳೆ
ಹದಿನೆಂಟು ಚೈತ್ರ ಕಳೆದು
ನಲ್ಲ ನಿನ್ನ ನೋಡಿದಾಗ
ನಾಚಿ ನಿಂತ ನನ್ನ ಕೆನ್ನೆ
ರಂಗೇರಿತು!!
ಆ ನೀಲಿ ಬಾನಿನಲ್ಲಿ
ಚುಕ್ಕಿಗಳ ಸಾಲಿನಲ್ಲಿ
ಬೆಳದಿಂಗಳಾ ಚಂದ್ರ
ಬೆಳಕ ತೋರಿದಾ
ನಲ್ಲಾ
ನಿನ್ನ ನೋಡಲು!!
ನಿನ್ನೊಡನೆ ನಾನಿರಲು
ಮಲ್ಲಿಗೆಯು ಘಮ್ ಎನಲು
ಪ್ರಣಯ ಗೀತೆ ಹಾಡುವಾಗ
ಶಶಿ ಜಾರಿದಾ
ನಲ್ಲಾ
ರವಿ ಮೂಡಿದ!!
- ಪಿ.ಜಿ.ಜ್ಯೋತಿ
23 Aug 2016, 03:59 pm
Download App from Playstore: