ಕವನದ ಶೀರ್ಷಿಕೆ ಸದೃಶ ದೇವರು.

ಕಿಟಕಿ ಇರದ ಗೂಡಿಗೆ ಕನ್ನಡಿಯಾದವರು,
ಸಫಲತೆಯ ದಾರಿಗೆ ಜ್ಞಾನದ ಬೆಳಕಾದರು.

ಹಿಂಜರಿಕೆ ದುಗುಡವ ದೂರ ಸರಿಸಿದವರೂ,
ಪ್ರತ್ಯಕ್ಷ ನಡೆಗೆ ಧೈರ್ಯ ತುಂಬಿದರು.

ಮೊಗ್ಗಿನ ಮನಸ್ಸಿಗೆ ಮೌಲ್ಯಾಮೃತ ಹರಿಸಿದವರು,
ಸನ್ಮಾರ್ಗವ ಪರಿಪಾಲಿಸೋ
ಶಿಶುವ ಕಂಡು ಖುಷಿ ಪಟ್ಟರು.

ನಿಸ್ವಾರ್ಥ ಸೇವೆಗೆ ಹೆಸರಾದವರು,
ಪ್ರಾಮಾಣಿಕ ಕೃತಿಗೆ ಸ್ಫೂರ್ತಿ ತುಂಬಿದರು.

ಸಂಸಾರದ ನಿರ್ವಹಣೆಗೆ ಮಾರ್ಗದರ್ಶಕರಾದವರು,
ಸಂಬಂಧದ ಸೇತುವೆ ಕಳಚದಂತೆ ಸಹಕರಿಸುತ್ತಿರುವರು.

ಸೋತಾಗ ಬೈಯದೆ ಬುದ್ಧಿ ಹೇಳಿದವರು,
ಗೆದ್ದಾಗ ಹೃದಯ ತುಂಬಿ ಆಶೀರ್ವದಿಸಿದರು.

ಅಂತರಂಗದ ಅಧ್ಯಯನ ಮಾಡಿದವರು,
ಉನ್ನತ ವಿದ್ಯೆಗೆ ಗುರುವಾದರೂ.

ವೇದಿಕೆಯ ಮಾತುಗಳಿಗೆ ಪ್ರೇರಣೆ ನೀಡಿದವರು,
ಎತ್ತರದ ಸ್ಥಾನದಲ್ಲಿ ನೋಡಲು ಬಯಸಿದರು.

ಜಿಗುಪ್ಸೆಯ ಜೋಗಿಯನ್ನು ವಾತ್ಸಲ್ಯದಿ ಪೊರೆದವರು,
ಪ್ರಪಂಚವ ಮರೆವಷ್ಟು ಪ್ರೀತಿಸಿದರು.

ಬಚ್ಚಿಡುವ ಮುತ್ತಂತೆ ಜೊತೆಯಾದವರು,
ನೆತ್ತರ ಕಣ ಕಣದ ಸ್ಮರಣೆಯಲ್ಲಿ ಬೆರೆತರು.

ಧನ್ಯತೆಯ ಜೀವನಕ್ಕೆ ಸಾಕ್ಷಿಯಾದವರು,
ಪುಟಿಯುವ ಭಾವಕೆ ಸಂಜೀವಿನಿಯಾದರೂ.

ನಾಲಿಗೆ ಮಲಗುವ ತನಕ ನುಡಿಯ ಸಾಲಿಗೆ ಸಾಹುಕಾರರು,
ಪ್ರಬುದ್ಧ ಸಮಾಜಕ್ಕೆ ಇವರೇ ಸದೃಶ ದೇವರು.

- nagamani Kanaka

05 Apr 2025, 03:49 pm
Download App from Playstore: