ಕವನದ ಶೀರ್ಷಿಕೆ ನಾಗಲೋಕದ ಪುಷ್ಪಗಳ ಪುಟ್ಟಜೋಡಿ.
ಮಲ್ಲಿಗೆ ಮದರಂಗಿಲಿ ಕೆಂಪಾಗಿ ಅರಸಿತು ಸುಗಂಧರಾಜನ,
ಮಿಂಚಿನ ಬೆಳಕಲಿ ಕಣ್ಮುಚ್ಚಿ ಹುಡುಕುವೆ ನಿ ಸಿಗೋ ತನ.
ಸಂಪಿಗೆ ಧಮಲು ಸೆಳೆಯಿತು ಹುಣ್ಣಿಮೆಯಲಿ ಹೊಳೆಯೋ ಸಾಮ್ರಾಟನನ್ನ,
ಬಿರಿದ ನೈದಿಲೆ ನಾಟ್ಯಧಿ ತಬ್ಬಿತು ಮಧುವ ಹೀರೋ ಭ್ರಮರವನ್ನ.
ನಾಗಲೋಕದ ಪುಷ್ಪಗಳ ಪುಟ್ಟಜೋಡಿಗೆ ಪ್ರಕೃತಿ ಬೆಳಗಿತು ಆರತಿ,
ಮುಳ್ಳಲ್ಲಿ ನಗುವ ಗುಲಾಬಿಯಂತೆ ಗೂಡಲ್ಲಿರುವ ಪ್ರೀತಿ.
ಭಾವದೆಲೆಗಳ ಪೋಣಿಸಿ ಅರ್ಪಿಸಿದೆ ಭೀಮನ ಪ್ರಾರ್ಥಿಸಿ,
ನಮ್ರತೆಗೆ ಮನ ಬೆರೆಯಿತು, ಸೋಮರಸವನ್ನು ಲೇಪಿಸಿ.
ಜೇನ ಹನಿಯ ಕಡಲಲ್ಲಿ ಮುಳುಗಿದೆ ಸುಮದ ದಂಡು,
ಬೆಳಕು ಬಯಸದ ರಾತ್ರಿ ರಾಣಿ ಬೆಳದಿಂಗಳೊಂದೆ ಸಾಕೆಂದಿದೆ ಸಿಹಿಯನ್ಉಂಡು.
ಸಪ್ತ ವಾರವು ಜಪಿಸೋ ಮಂತ್ರ,
ಬಿಡದೆ ಶಿವನ ಮೂಡಿ ಸೇರೋ ಅಸ್ತ್ರ.
ತೇಲೋ ಮೋಡದ ಹಾಗೆ ಹೂಗಳ ಮನದಿ ಮೊಧವಿರಲಿ,
ಓಡುವ ಕಾಲದ ನೆನಪುಗಳು ಶ್ರೀಗಂಧದಂತಿರಲಿ.
ಮಾಸದು ಮಮತೆ
ಕರಗೋ ಸಂಜೆಯಂತೆ,
ಶುದ್ಧವಾದ ಸ್ನೇಹ
ನೊರೆ ಹಾಲಂತೆ.
- nagamani Kanaka
05 Apr 2025, 03:56 pm
Download App from Playstore: