ಹುಟ್ಟುಹಬ್ಬದ ಶುಭಾಶಯಗಳು ಮುದ್ದು ಮಗಳೇ..!!
ಹುಟ್ಟುಹಬ್ಬದ ಶುಭಾಶಯಗಳು ಮುದ್ದು ಮಗಳೇ..
ಈ ದಿನ ಅಪ್ಪನ ಮೊಗದಲ್ಲಿ ಸಂತಸದ ಜೊತೆಗೆ ಕಂಬನಿ ತರಿಸಿದ ದಿನ
ಅಮ್ಮ ನ ನೋವಿನ ನರಳಾಟದಲ್ಲೂ ನಿನ್ನ ಮುದ್ದು ಮುಖ ನೋಡಿ ಮೊಗದಲ್ಲಿ ನಗು ತಂದ ಸುದಿನ..!!
ಮುದ್ದು ಮಗಳೇ... ದೇವರು ನಮಗೆ ನೀಡಿದ ವರ ನೀನು..
ನಿನ್ನ ಮೇಲಿನ ನಮ್ಮ ಪ್ರೀತಿಯನ್ನು ಪದಗಳಿಂದ ವಿವರಿಸಲು ಸಾಧ್ಯವಿಲ್ಲ..
ನೀನೇ ನಮ್ಮ ಜೀವನದ ಬಹುದೊಡ್ಡ ಸಂಪತ್ತು..
ನಮ್ಮ ಪ್ರತೀ ನಿರ್ಧಾರದಲ್ಲೂ ಪ್ರತೀ ಖುಷಿಯಲ್ಲೂ ನೀನು ಇರುತ್ತೀಯ..
ಹೀಗೇ ನಗು ನಗುತ್ತಾ ಅಪ್ಪ ಅಮ್ಮನ ಮೊಗದಲ್ಲೂ ನಗು ಮೂಡಿಸುತ್ತಾ ನೂರ್ಕಾಲ ಬಾಳು ಮಗಳೇ..
ನಿನ್ನ ಪ್ರತೀ ಹೆಜ್ಜೆ ಹೆಜ್ಜೇಯಲ್ಲೂ ಕಾವಲಾಗೀ ನಾವಿದ್ದೇವೆ.
ಮಗದೊಮ್ಮೆ,
ಹುಟ್ಟುಹಬ್ಬದ ಹಾರ್ದಿಕ ಶುಭಾಶಯಗಳು ಬಂಗಾರಾ..❤️?
- Chaithu gowda Kalenja
15 Apr 2025, 11:56 am
Download App from Playstore: