ನನ್ನಮ್ಮ
ಹೆತ್ತವಳಲ್ಲ ಅವಳು
ಹಾಲುಣಿಸದಿದ್ದರೂ ತಾಯಿಯಾದವಳು
ಪ್ರೀತಿ ಕಾಳಜಿಯ ಸ್ವರೂಪದವಳು
ಇಷ್ಟವಾದುದ್ದೇಲ್ಲ ಕೇಳುವ ಮುನ್ನವೇ ಕೊಡಿಸಿದವಳು
ತನಗಾಗಿ ಏನನ್ನೂ ನಿರೀಕ್ಷಿಸದ ಅವಳು
ಮಕ್ಕಳಿಗಾಗಿ ಎಲ್ಲವನ್ನೂ ಬೇಡಿದವಳು..
ಹೆತ್ತವಳಲ್ಲ ಅವಳು
ಆದರೂ ಹೆತ್ತವರ ಪ್ರೀತಿ ಮೀರಿಸಿದವಳು
ಹೇಳದೇ ಹೊರಟವಳು
ಬೆಟ್ಟದಷ್ಟು ಪ್ರೀತಿ ಕೊಟ್ಟು ಕಣ್ಮರೆಯಾದವಳು
ಅವಳಿಗಾಗಿ ಏನನ್ನೂ ಮಾಡಿಕೊಳ್ಳದ ಅವಳು
ಮಕ್ಕಳಿಗಾಗಿ ಡಬ್ಬಿಗಳ ತುಂಬ ತಿನಿಸುಗಳ ತುಂಬಿದವಳು..
ಇಂದಿಗೂ ಮನ ಮಿಡಿಯುತ್ತಿದೆ ಅವಳಿಗಾಗಿ
ಇಂದಿಗೂ ಈ ನಿನ್ನ ಮಗು ಬಯಸುತ್ತಿದೆ
ನೀ ಮರಳಿ ಬರಬೇಕೆಂದು
ಮತ್ತೋಮ್ಮೆ ನಿನ್ನ ಮಡಿಲಲ್ಲಿ ಮಗುವಾಗುವಾಸೆ..
- Jyothi
16 Apr 2025, 03:19 pm
Download App from Playstore: