ಕ್ರಾಂತಿಕಾರಿ ಅಂಬೇಡ್ಕರ್
ಓ ಕ್ರಾಂತಿಕಾರಿಯೇ
ನಿನ್ನ ಕನಸು ನನಸಾಗುವ
ಸಮಯವಿನ್ನೆಲ್ಲಿ.
ದಲಿತರ ಜೀವನ
ಕಗ್ಗತ್ತಲೆಯ ಪರಿಯಲಿ
ಸಾಗುತಿದೆ ಬದಲಾಗದ
ಪರಿಸರದಲಿ...
ಅಕ್ಷರಸ್ಥರು ಮಿತಿ ಮೀರಿದರು
ಜ್ಞಾನಿಗಳಲ್ಲ
ಅಂಧಕಾರದ ಯುಗ
ನಡೆಯುತಿದೆ,,,,,,,,,, ಈಗಲೂ,,,,,,,,,,
ಸಮಾನತೆ ತಿಳಿಸಿದೇ ನೀ
ಸಂವಿಧಾನದಲಿ
ಆದರೆ ಅದು ಕೇವಲ ಪುಸ್ತಕೀಯ
ದಲಿತರು ಹಾಗೆಯೇ ಇಂದು,,,,,,,,,,,,,
ನಿನ್ನಯ ದೀಪದ ಬೆಳಕಿನಲಿ
ಸ್ವಪ್ನವ ಕಂಡರಿವರು
ಆದರೆ ಅಂಧಕಾರದ ಕತ್ತಲೆ
ಧಾವಿಸಿದೆ ಇಂದು,,,,,,,,,
ಓ ಕ್ರಾಂತಿಕಾರಿಯೇ
ನಿನ್ನ ಕನಸು ನನಸಾಗುವ
ಸಮಯವಿನೆಲ್ಲಿ,,,,,,,,,,
- ಮೇಘಾ ಬೆಳಧಡಿ
16 Apr 2025, 08:45 pm
Download App from Playstore: