ಮನದ ಮಾತು

ಹೇಳಿಬಿಡಲೇ ನಾನು ನಿನಗೆ
ನನ್ನೊಳಗವಿತಿರುವ ಗುಟ್ಟು
ಮನದ ಬೇಗೆಯನರುಹಿ
ಹಗುರಾಗಬೇಕಿದೆ ಈ ಹೃದಯವು
ಪ್ರೀತಿಯ ಅಪ್ಪುಗೆಯ
ಬಯಸಿದೆ ಈ ಮನವು
ಸಂತೈಸುವ ಹೊಣೆ ಈಗ ನಿನ್ನದು.....
ಅತ್ತು ಹಗುರಾಗಲು
ಬೇಕಿದೆ ಮಮತೆಯ ಮಡಿಲು
ನೀ ತೋರುವೆಯಾ ಭರವಸೆಯ ಬೆಳಕು
ಮೌನದಿ ಕಾಳಜಿಯ, ಪ್ರೇಮದ ಒಲುಮೆಯ
ನೀಡುವೆಯಾ ನನಗಾಗಿ ನೀನು.....
ಇರುವೆಯಾ ನನ್ನೊಂದಿಗೆ ಎಂದೂ.....

- ಸಖೀ

26 Apr 2025, 09:25 pm
Download App from Playstore: