ಕವನ ಸಮಾಜದ ನಂದಾದೀಪ.


ಕಾಯಿ ಸಿಕ್ಕಾಗ ಹಣ್ಣು ಮಾಡುಲು ಹುಡುಕುವ ಪ್ರಯತ್ನದ ಮಾರ್ಗಗಳೇ ಕ್ರಿಯಾಶೀಲತೆ,
ರಸಾ ತುಂಬಿದ ಹಣ್ಣನ್ನು ಬಳಸುವ ವಿಧಾನವೇ ಆತ್ಮಿಯತೆ.

ತಂಪೆರೆವ ವೃಕ್ಷಕ್ಕೆ ನೆಮ್ಮದಿಯ ನೀರಾಗಬೇಕು,
ಸುಸ್ತಿಗೆ ಆಸರೆಯಾದ ನೆರಳನ್ನು ಜೀವನದ ಪಯಣದಲ್ಲಿ ನೆನಪಿಡಬೇಕು.

ಬಾಹ್ಯ ನೋಟ್ಟಕ್ಕೆ ಸೆರೆಯಾಗುವುದು ಪ್ರಕೃತಿಯ ಸೌಂದರ್ಯ,
ವಾಸ್ತವ ಸನ್ನಿವೇಷ ಅರಿಯಲು ತೆರೆಯುವುದು ಉದಾತ್ತ ಗುಣಗಳ ಆಂತರ್ಯ.

ಕಾಲಗಳು ಬದಲಾದಂತೆ ಚಿಂತನೆಗಳು ಬದಲಾಗಬೇಕು,
ಹಿಂದಿನದನ್ನು ಆಪೇಕ್ಷಿಸದೆ ಕಷ್ಟವಾದರೂ ಇಂದಿನ ಜೊತೆ ನಡೆಯಬೇಕು.

ಪ್ರಾಣವಿರದ ದೇಹಕ್ಕಿಲ್ಲ ಮೌಲ್ಯ,
ನಿರ್ಧಾರಿತ ಹೃದಯಕ್ಕೆ ಅರ್ಥವಾಗದು ಭಿನ್ನಹದ ತಾತ್ಪರ್ಯ.

ಬಿದ್ದಾಗ ಎತ್ತಿದವರು ನನ್ನವರೆಂದು ಬೀಗಬೇಡ,
ಸಹಾಯಕ್ಕೆ ಕೃತಜ್ಞತೆ ಸಲ್ಲಿಸಿ ಮುಂದೆ ನಡೆಯಬೇಕು ನೋಡ.

ಬಯಕೆಗಳ ಸಾಲು ತಿರಸ್ಕಾರದ ಪ್ರತೀಕ,
ವಿನಮ್ರತೆಗೆ ತೆರೆಯದ ಸ್ನೇಹ ನಿರರ್ಥಕ.

ಪಡೆದ ಜ್ಞಾನದ ಅನುಭವಗಳೇ ಮುಂದಿನಮಾರ್ಗದರ್ಶಕ,
ಸಮಾಜದ ನಂದಾದೀಪವಾಗಿ ನೊಂದವರ ಕಣ್ಣೀರೊರೆಸುವುದೇ ಸಾರ್ಥಕ.

- nagamani Kanaka

08 May 2025, 03:57 pm
Download App from Playstore: