ಬಂಗಾರದ ಪುಟದಂತೆ ತೆರೆದ ಮನ.
ಕೆಸರಾಗಿದೆ ಮನದ ಕೊಳ,
ಗಾಳಕ್ಕೆ ಸಿಲುಕಿದ ಚಿಂತನೆಗಳಲ್ಲಿ.
ಸುಂಟರಗಾಳಿ ಸುತ್ತುತ್ತಿದೆ ನಿರ್ಧಾರವಿಲ್ಲದ ಮೆದುಳಿನಲ್ಲಿ,
ಅಮೃತವನುಣಿಸಿ ಜೊತೆಯಾಗುವವರಿಲ್ಲ ಭೂಮಂಡಲದಲ್ಲಿ.
ಕಲ್ಲಂತೆ ಗಟ್ಟಿಯಾಗಿರಬೇಕು ನಮ್ಮೊಳಗೆ ನಾವು,
ಹಾಲಂತೆ ತಿಳಿಯಾಗಿದ್ದರೆ ಕಾಡದು ನೋವು.
ಸಜ್ಜನರ ಮೊಗದಲ್ಲಿ ಸಂತಸದ ಚೆಲುವು,
ಶುದ್ಧ ಮನಸ್ಸೊಂದು ಮುಗುಳ್ನಗೆಯ ಹೂವು.
ಬೇವಂತ ಕಷ್ಟಗಳ ಅಪ್ಪಿಕೊಳ್ಳಬೇಕು ಮೊದಲು,
ಜ್ಞಾನವಿರಬೇಕು ತಟಸ್ಥ ಗುರಿಯ ವಿಮರ್ಶಿಸಲು.
ಉತ್ಸಾಹದ ಕೆಲಸವೇ ಮಾಧುರ್ಯದ ಸಾಲು,
ಸೃಜನತೆ ಸಂಶೋಧಕರ ಪಾಲು, ಪ್ರಶಸ್ತಿ ಪಡೆಯಲು.
ಬಂಗಾರದ ಪುಟದಂತೆ ತೆರೆದ ಮನ,
ತಾಳ್ಮೆಯ ಸಿರಿಯಲ್ಲಿ ಮೆರೆಯುವ ಚೇತನ.
ಪಾದರಸದಂತೆ ಬೆರೆಯುವರು ಸಮಾಜವನ್ನ,
ಮಾನವ ಬದಲಾಗಿ ಬೆಳೆಸಿಕೊಳ್ಳಬೇಕು ಇಂತಹ ವ್ಯಕ್ತಿತ್ವವನ್ನ.
- nagamani Kanaka
08 May 2025, 04:02 pm
Download App from Playstore: