ಕವನ ಅಮ್ಮನ ತ್ಯಾಗ.
ಮಡಿಲು ತುಂಬಿದ ಹೆಣ್ಣಿನ ಮೊಗದಲ್ಲಿ ಮೂಡುವುದು ಮಂದಹಾಸ,
ಕಷ್ಟಗಳ ಕರಗಿಸಿ ಹೊಸ ಕನಸುಗಳೊಂದಿಗೆ ಕಳೆವಳು ನವಮಾಸ.
ಸಡಗರದ ಐಸಿರಿಯೆ ಧರೆಗಿಳಿದ ಕಂದ,
ಮನೆಯವರ ಕೈಯಲ್ಲಿ ಹೊಳೆವ ಮಣಿಯಾಗಿ ಮೆರೆದ.
ಅಮ್ಮನ ಹಾರೈಕೆಯಲಿ ಸ್ವರ್ಗದ ಸುಖವಿತ್ತು,
ಹೃದಯದ ಗೋಪುರದಲ್ಲಿ ಮಗುವಿನ ಮುಂದಿನ ಭವಿಷ್ಯವಿತ್ತು.
ಅಪೂರ್ವ ಚಿಂತನೆಗಳ ಅಮ್ಮನ ಅರ್ಪಣೆಯ ಭಾವ,
ಬೆವರರಿಸಿ ದುಡಿದು ಬೆಳೆಯಲು ಅಸುಳೆಗೆ ಪ್ರೇರಣೆಯ ಜೀವ.
ಕಂದನ ಮಂಗಳ ಕಾರ್ಯಕ್ಕೆ ಸುಧೆಯು ಅಮ್ಮ,
ಹರ್ಷದಲಿ ಅಪ್ಪುವಳು ಮಕ್ಕಳು ಪ್ರಗತಿ ಕಂಡ ಜೀವನ.
ತ್ಯಾಗ ಪ್ರೀತಿಗೆ ಸಾಕ್ಷಿಯಾದ ಜನನೀ,
ಸಂಸಾರ ನಡೆಸುವಳು ಮಕ್ಕಳಿಗಾಗಿ ಬಚ್ಚಿಟ್ಟು ಕಂಬನಿ.
ಕೋಟಿ ಗಳಿಸಿದರು ಸಾಧ್ಯವೆ ಕೊಳ್ಳಲು ದೇವತೆಯ ಕರುಣೆಯನ್ನ,
ಗಂಜಿ ಕುಡಿದರು ಬಿಡಬಾರದು ಸ್ವಾಭಿಮಾನವನ್ನ.
ಮಕ್ಕಳ ಕೋಪವ ಕೊನೆಗೊಳಿಸುವಳು ತಾಳ್ಮೆಯಲ್ಲಿ,
ಸುವ್ಯವಸ್ಥಿತ ನಾಗರೀಕನಾಗಲು ಬಯಸುವಳು ಪೊರೆವ ನಾಡಲ್ಲಿ.
ನೋಯಿಸದಿರು ಮಗುವೆ ಜನ್ಮವಿತ್ತ ತಾಯಿಯನ್ನ,
ಸದಾ ಪೂಜಿಸು ಶೋಕ ವಿಮುಕ್ತಿಮಾಡುವ ಸುಮತಿಯನ್ನ.
ಮಾತೆಯ ಮಮತೆಯ ಸ್ಮರಿಸಿ ಮಕ್ಕಳೆ ನಿಮ್ಮ ಸಂಸ್ಕಾರದಲಿ,
ಅಮ್ಮನಿಗೆ ಝೈಕಾರ ಮೊಳಗಿಸಿ ಶ್ರೇಷ್ಟತೆಯ ಕೀರ್ತಿಯಲಿ.
- nagamani Kanaka
11 May 2025, 06:06 pm
Download App from Playstore: