ಬದುಕು

ನನ್ನಬಾಳ ಪುಟಗಳ
ತಿರುವಿ ಹಾಕಿದರೆ ಸಿಗದು
ನನ್ನ ತಾಯಿ ತಂದೆಯ
ಅಪ್ಪುಗೆಯ ಒಲವು.

ತನ್ಮಡಿಲೊಳಗೆ
ಚಂದ್ರನ ಬೆಳದಿಂಗಳ
ರಸದೌತನ ನೀಡಿದಾಕೆ.
ಅವಳೇ ಮಮತೆಯ ಸಾಕರಾಮೂರ್ತಿ.

ಮಗಳಲ್ಲ ಮಗಳು
ತಾಯಲ್ಲ ತಾಯಿ
ಈ ಪ್ರೀತಿಗೆ ಸಮುದ್ರದಾಚೆಗಿದೆ
ತಂಪಾದ ಇಂಪಾದ ಪಿಸುಮಾತುಗಳ ಅಪ್ಪುಗೆ.

ನನ್ನನ್ನಗಲಿದೆ ಇಂದು
ನನ್ನಮನದಲ್ಲಿರುವೆ
ನೀನೆಂದೆಂದೂ ನನ್ನವರಿಂದು
ಯಾರು ಇಲ್ಲ ನಿನ್ನಗಲುವಿಕೆ ನನ್ನಲ್ಲಿಲ್ಲ.

ಹೃದಯದ ಬಡಿತದಿ
ನೀನಿರುವಿ ನಾಡಿಮಿಡಿತದಿ
ಬೆರೆತಿರುವೆ,,,, ಬದುಕುವ
ಹಂಬಲ ನೀಡಿರುವೆ ಅವಳೇ ನನ್ನವ್ವ ನನ್ನ ಸಾಕವ್ವಾ

- ಮೇಘಾ ಬೆಳಧಡಿ

12 May 2025, 01:27 am
Download App from Playstore: