ಕವನ ಬುದ್ಧ ಪೂರ್ಣಿಮಾ.
ಜಗದ ಬೆಳಕು ಉದಯಿಸಿತು ಮಾಯಾದೇವಿಯ ಉದರದಿಂದ,
ಕಪಿಲ ವಸ್ತುವಿನ ಜನಕೆ ಧನಕನಕಾದಿಗಳ ಹೊಳೆ ಹರಿಯಿತು ಮಹಾತ್ಮನ ಆಗಮನದಿಂದ.
ಮಗನ ಭವಿಷ್ಯ ಕೇಳಿ ಬೆಚ್ಚಿ ಬಿದ್ದ ರಾಜ ಶುದ್ಧೋದನ,
ಅರಮನೆಯಲ್ಲಿ ಕೊರತೆಗಳು ಸುಳಿಯದಂತೆ ಪೋಷಿಸಿದ ತಂದೆ ರಾಜಕುಮಾರನನ್ನ
ಹೊರ ಪ್ರಪಂಚಕ್ಕೆ ಕಾಲಿಟ್ಟ ಸಿದ್ಧಾರ್ಥನಿಗೆ,
ಕಂಡ ನಾಲ್ಕು ದೃಷ್ಯಗಳು ದಿಕ್ಸೂಚಿಗಳಾದವು ಕುಟುಂಬದ ವಿಮೋಚನೆಗೆ
ತಥಾಗತ ಮಾರ್ಗವ ಅರಸುತ್ತ ಹೊರಟ ಪ್ರಜಾಪತಿ ಸುತ,
ಸುಜಾತಳ ಪ್ರಸಾದ ಸ್ವೀಕರಿಸಿ ಧ್ಯಾನಾಸಕ್ತನಾಗಿ ದುಖಃದ ಮೂಲವನರಿತ.
ಾಸೆಗಳ ನಿಯಂತ್ರಣ ವರ್ತಮಾನದ ಚಿಂತನೆಗಳಿಗೆ ಶಕ್ತಿ,
ಮಿಡಿದ ಹೃದಯಗಳ ಉಪಚರಿಸುವ ಪ್ರವರ್ತನಗಳೇ ಸನ್ನಡತೆಗೆ ಸ್ಪೂರ್ತಿ.
ಜಾತಕ ಕಥೆಗಳ ಸಾರ ನಮ್ಮ ನಿತ್ಯ ಬದುಕಿಗೆ ಆಧಾರ,
ಅಷ್ಟಾಂಗ ಮಾರ್ಗಗಳ ಪಾಲನೆ ಶುದ್ಧ ಮನಸಿಗೆ ಆಹಾರ.
ಗೌತಮ ಬುದ್ಧನಾಗಿ ಗಳಿಸಿದ ಸಿದ್ಧಿಯ ವೈಶಾಕ ಪೂರ್ಣಿಮದಂದು,
ಅಂಧಕಾರವ ಅಳಿಸಿ ತನ್ನ ನಿಗ್ರಹಿಸಲು ಸ್ಥಳವಾಯಿತು ಬೋಧಿ ವೃಕ್ಷವಂದು.
ಶರಣಾದ ಶಿಷ್ಯರು ಹರಡಿದರು ಬುದ್ಧನ ತತ್ವಗಳ ಜಗದಗಲ,
ವಿಷ್ಣುವಿನ ಪ್ರತಿರೂಪಕ್ಕೆ ಸೋತು ಪ್ರಕೃತಿ ನಿಸ್ವಾರ್ಥದಿ ನಮಗೆ ನೀಡುತ್ತಿದೆ ಸರಕುಗಳ ಜಾಲ
ನೈತಿಕತೆ ನೆತ್ತರಾದರೆ ಸಿಗುವುದು ಆನಂದ,
ಕೈಹಿಡಿದ ಸ್ನೇಹ ಆತ್ಮ ಸಂಗಾತಿಯಾದರೆ ಕಳೆವ ಕ್ಷಣಗಳೆಲ್ಲ ಚಂದ.
ಜನನ, ಮರಣ ಮತ್ತು ಅಂತರಂಗದ ನವ ಜ್ಯೋತಿಗೆ ಗುರುವಾದ ದಿನವಿದು,
ಬುದ್ಧ ಪೂರ್ಣಿಮದ ಆಚರಣೆ ಎಂದರೆ ಸಾರ್ಥಕತೆಯ ನಿಲುವ ತಿಳಿಯುವುದು.
- nagamani Kanaka
12 May 2025, 01:27 pm
Download App from Playstore: