ಅಪ್ಪ

ಉಪ್ಪಿಗಿಂತ ರುಚಿ ಇಲ್ಲ ತಾಯಿಗಿಂತ ದೇವರಿಲ್ಲ ಎಂಬ ಗಾದೆ ಮಾತು ಎಲ್ಲರಿಗೂ ಗೊತ್ತಿರುವ ವಿಷಯವೇ, ಹಿಂದಿನ ಕಾಲದಿಂದಲೂ ಋಷಿಮುನಿಗಳು,ಕವಿಗಳು ಅಮ್ಮನ ಬಗ್ಗೆ ನಾನಾ ಬಗೆಯಲ್ಲಿ ವರ್ಣಿಸುವುದು ನಮ್ಮೆಲ್ಲರಿಗೂ ತಿಳಿದಿರುವ ವಿಷಯವೇ, ಇಂದು ಜಗತ್ತಿನಲ್ಲಿ ಮಹಿಳೆಯರಿಗೆ ಮಹತ್ವದ ಸ್ಥಾನವಿದೆ. ಕವಿಗಳು ತಮ್ಮ ಕಾವ್ಯ ರಚನೆಗಳಲ್ಲಿ ಅಮ್ಮನ ಬಗ್ಗೆ ಆಕರ್ಷಕ ಭಾಷಾಶೈಲಿಯಲ್ಲಿ ವರ್ಣಿಸಿದ್ದಾರೆ. ಆದರೆ ಅಪ್ಪನ ಬಗ್ಗೆ ಯಾವುದೇ ಕಾವ್ಯ ಕಥೆಗಳಲ್ಲಿ ಉಲ್ಲೇಖವಿಲ್ಲದಿರುವುದು ನಮಗೆಲ್ಲರಿಗೂ ತುಂಬಾ ದುಃಖದ ಸಂಗತಿ ಎಂದು ಹೇಳಬಹುದು. ಜಗತ್ತಿನಲ್ಲಿ ಕೋಪಿಷ್ಟ ತಂದೆ ಹೊಡೆಯುವ ಅಪ್ಪಂದಿರು ಜಗತ್ತಿನಲ್ಲಿ ಎಲ್ಲಾದರೂ ಎರಡು ಪರ್ಸೆಂಟ್ ರಷ್ಟು ನಾವು ಕಾಣಬಹುದು ಆದರೆ ಪ್ರೇಮವನ್ನು ನೀಡುವ ಅಪ್ಪನ ಬಗ್ಗೆ ಏನು ಹೇಳುವಿರಿ?------.
ಏನಾದರೂ ನೋವು ಕಷ್ಟಗಳು ಬಂದರೆ ಅಮ್ಮನ ಅಳುತ್ತಾಳೆ ಅಮ್ಮ ನು ಅತ್ತು ಮನಸ್ಸನ್ನು ಹಗುರ ಮಾಡಿಕೊಳ್ಳುತ್ತಾಳೆ.ಆದರೆ ಅಪ್ಪನು ಹಾಗಲ್ಲ ಏನೇನು ಕಷ್ಟಗಳು ಬಂದರೂ ಸಂಯಮದಿಂದಿರುತ್ತಾನೆ ಅಮ್ಮನಿಗೆ ಸಾಂತ್ವನ ಹೇಳುತ್ತಾನೆ ಆಗ ಅವಳನ್ನು ತಾನೇ ಸಮಾಧಾನ ಮಾಡುತ್ತಾನೆ. ಆಗ ಅಮ್ಮನಿಗಿಂತ ಸಾಂತ್ವನ ಹೇಳುವ ಅಪ್ಪನೇ ಶ್ರೇಷ್ಠನಾಗುತ್ತಾನೆ.ಯಾಕೆಂದರೆ ಉರಿಯುವ ದೀಪದಲ್ಲಿ ಜ್ಯೋತಿಗಿಂತ ದೀಪವೇ ಬಿಸಿಯಾಗಿರುತ್ತದೆ. ಆದರೆ ಮಹತ್ವ ಜ್ಯೋತಿಗೆ ಜಾಸ್ತಿ ಇರುತ್ತದೆ.ಎಲ್ಲರ ಎದುರು ಕಣ್ಣೀರು ಸುರಿಸುವ ಅಮ್ಮನನ್ನು ನೋಡುತ್ತೇವೆ. ಆದರೆ ಅಪ್ಪ ರಾತ್ರಿ ತಲೆ ದಿಂಬಿನಲ್ಲಿ ಮುಖಹುದುಗಿಸಿ ಮುಸುಮುಸು ಅಳುವುದನ್ನು ಮಾತ್ರ ನಾವು ನೋಡುವುದಿಲ್ಲ. ಅಲ್ಲೇ ನಾವು ತಪ್ಪು ಮಾಡುವುದು ತಂದೆಗೆ ಯಾವುದೇ ರೀತಿಯ ಕಷ್ಟಗಳು ನೋವುಗಳಿರುವುದಿಲ್ಲ ಎಲ್ಲವನ್ನು ಅಮ್ಮನೊಬ್ಬಳೇ ನಿಭಾಯಿಸುತ್ತಾಳೆ.ಎಂಬುದು ನಮ್ಮ ತಪ್ಪು ತಿಳುವಳಿಕೆ ಅಪ್ಪನಿಗೂ ಸಹ ಒಂದು ಮನಸ್ಸಿದೆ ಎಂಬುದನ್ನು ನಾವು ಅರಿತಿರಬೇಕು.

ನಡು ಜೀವನದಲ್ಲಿ ಹೆಂಡತಿ ತೀರಿ ಹೋದರೆ ಅಪ್ಪನು ತನ್ನ ಕಣ್ಣೀರನ್ನು ತಡೆಹಿಡಿದು ಮಕ್ಕಳಿಗೆ ಆಧಾರ ನೀಡುತ್ತಾನೆ. ದಿನಾಲು ಅಡುಗೆ ಮಾಡಿ ಬಡಿಸುವ ಅಮ್ಮ ಎಲ್ಲರಿಗೂ ನೆನಪುಳಿಯುತ್ತಾಳೆ. ಆದರೆ ಅಡುಗೆಗಾಗಿ ಸಾಮಾನು ತರುವ ಅಪ್ಪನನ್ನು ಎಲ್ಲರೂ ಸಹಜವಾಗಿ ಮರೆಯುತ್ತಾರೆ.

ತನ್ನ ಮನೆಗಾಗಿ ಪರದಾಟ.ಕಷ್ಟಪಡುವ ಪುರುಷ ಅಪ್ಪನು ನಿಜವಾಗಲೂ ಮಹಾನ್ ವ್ಯಕ್ತಿಯಾಗಿದ್ದಾನೆ.
ಶ್ರೀ ಕೃಷ್ಣನ ಅಮ್ಮ ದೇವಕಿ, ಯಶೋಧೇಯರ ಪ್ರಶಂಸೆಯನ್ನು ಎಲ್ಲಾ ಕಡೆಯೂ ಕೇಳುತ್ತೇವೆ. ಆದರೆ ಮಗನ ರಕ್ಷಣೆಗಾಗಿ ನಡುರಾತ್ರಿಯಲ್ಲಿ ಮಗನನ್ನು ತಲೆಯ ಮೇಲೆ ಹೊತ್ತುಕೊಂಡು ಪ್ರವಾಹದಿಂದ ತುಂಬಿದ ನದಿಯನ್ನು ದಾಟಿದ ಅಪ್ಪನಾದ ವಾಸುದೇವನನ್ನು ಮರೆಯಬಾರದು ಅಲ್ಲವೇ,,,,,,,,,

ಅಪ್ಪನ ಮಹತ್ವ ಯಾರಿಗೆ ಗೊತ್ತಾಗುತ್ತದೆ? ಚಿಕ್ಕಂದಿನಿಂದಲೇ ಅಪ್ಪ ತೀರಿ ಹೋದ ನಂತರ ಸಣ್ಣ ವಯಸ್ಸಿನಲ್ಲಿ ಅನೇಕ ಜವಾಬ್ದಾರಿಗಳನ್ನು ಹೊತ್ತು ಮಗನಿಗೆ ಮಾತ್ರ ನಿಜವಾದ ಅರ್ಥವೂ ತಿಳಿಯುತ್ತದೆ.

- ಮೇಘಾ ಬೆಳಧಡಿ

16 May 2025, 04:10 pm
Download App from Playstore: