ನಿನ್ನದೆ ಧ್ಯಾನದಲಿ
ಪ್ರೀಯೆ...
ಅಪರಿಚಿತಳಾಗಿ ಬಂದೆ
ನನ್ನ ಬಾಳಿನ ಪುಟಕೆ,
ಚಿರಸ್ಥಾಯಿಯಾಗಿ
ನೆಲೆಸಿ ಬಿಟ್ಟೆ ಹೃದಯದೊಳಗೆ,
ಸಿಟ್ಟು ಕೋಪ
ಸಿಡುಕು ಒಡಕು ಎಲ್ಲವೂ ನೋಡಿದೆ
ಆದರೂ ಬಯಸುತ್ತಿದೆ
ಮನಸ್ಸು ನಿನ್ನದೆ ಕಡೆಗೆ.....
ಸಖಿ...
ನಿನ್ನದೆ ಬಿಂಬ ಪ್ರತಿಬಿಂಬ ಕನ್ನಡಿಯೊಳಗೆ
ನಿತ್ಯವೂ ನಿನ್ನದೆ ಸಿಹಿ ಕುಣಿತ ಎದೆಯೊಳಗೆ
ಬಲ್ಲೆ ನಾನು ಕನ್ನಡದ ಕಾಗುಣಿತ
ತಿಳಿಯದಾದೆ ಪ್ರೀತಿಯ ಏರಿಳಿತ
ಮನಸಲಿ ರಾಗವಿಲ್ಲದ ಹಾಡಿನ ಕೇಕೆ
ಕೇಳುವವರಿಲ್ಲ ನನ್ನ ದಿನಚರಿಯ ಚಟುವಟಿಕೆ
ನಿನ್ನದೇ ಧ್ಯಾನದಲಿ
ಶುರುವಾಗಿದೆ ಹೊಸ ತಿಳಿವಳಿಕೆ.....
ಗೆಳತಿ....
ದೂರದಿಂದಲೆ ಸೆಳೆಯುತ್ತಿದೆ
ನಿನ್ನ ನಗು
ಪಕ್ಕದಲ್ಲಿ ಕೂತು
ಕೈ ಹಿಡಿದು
ಉಸಿರು ಬಿಗಿಹಿಡಿದು
ಕೇಳಬೇಕು ನಿನ್ನ ಮಾತು ಮೆಲ್ಲಗೆ
ಹೃದಯ ಹೊಡೆದು
ರಕ್ತ ಚೆಲ್ಲಿ ಚಿಗುರಬೇಕು
ಸೂಜಿ ಮಲ್ಲಿಗೆ
ಆ ಹೂವ್ವ ತಂದು ಅರ್ಪಿಸುವೆ
ನಿನ್ನ ಪಾದಕೆ
ಈಗಲಾದರೂ ನೀಡು ನನ್ನ
ಪ್ರೀತಿಗೆ ಸೂಚನೆ......
ಡಾII ನಾಗೇಶ್ ಮೌರ್ಯ
9743907399
- ಡಾ ನಾಗೇಶ ಮೌರ್ಯ
17 May 2025, 08:58 am
Download App from Playstore: