ಪ್ರೀತಿಯೆಂದು ಕರೆಯಬಹುದೇ
ಮೋಹಗೊಂಡೆ ನಿನ್ನ
ನೋಡಿ ನಾನು
ಮನಸೂರೆಗೊಂಡೆ ನನ್ನ
ಮನಸ ನೀನು
ಕಾರಣವೇನೆಂದು ತಿಳಿಯದಾದೆ
ಪ್ರೀತಿಯೆಂದು ಕರೆಯಬಹುದೆ?.......
ನೀಲಾಕಾಶದಲಿ ಕಪ್ಪು ಮೋಡಗಳೊಳಗೆ
ಮಿಂಚಾಗಿ ಸುಳಿದೆ,
ಗಿರಿಶಿಖರ ಮುಗಿಲ
ಚುಂಬಿಸುವ ಗಳಿಗೆ
ನೀರಾಗಿ ಸುರಿದು ಹರಿದು
ಪ್ರೇಮಸಾಗರ ತುಂಬಿದೆ!
ಎಷ್ಟು ಮೊಗೆದರೂ
ಖಾಲಿಯಾಗುತ್ತಿಲ್ಲ
ಕಾರಣ ಮೊಹಬ್ಬತ್ ಇರಬಹುದೆ ?...
ಬಿಸಿಲು ಮಳೆಯೊಂದಿಗೆ
ಕಾಣಿಸಿಕೊಂಡ ಕಾಮನ ಬಿಲ್ಲು
ಕಟ್ಟುತ್ತಿದೆ ಹೃದಯದೊಳಗೆ
ತಾಜಮಹಲು
ಕಾಯಿಸದೆ, ಸತಾಯಿಸದೆ
ಕೊಟ್ಟು ಬಿಡು ನಿನ್ನ ಪುಟ್ಟ ಹೃದಯ
ನನ್ನ ಹೃದಯದೊಳಗೆ
ಪ್ರೀತಿಯ ಕಸಿ ಮಾಡಬೇಕಾಗಿದೆ
ಕಾರಣ ನಿನ್ನ ಮೇಲೆ ಸಿಕ್ಕಪಟ್ಟೆ ಲವ್ ಆಗಿದೆ?
ಡಾII ನಾಗೇಶ್ ಮೌರ್ಯ
9743907399
- ಡಾ ನಾಗೇಶ ಮೌರ್ಯ
17 May 2025, 09:29 am
Download App from Playstore: