ಸುಖ ----ದುಃಖ



ದುಃಖ ಮರುಗಟ್ಟಿದಾಗ
ಸಂತೋಷದ ದಾರಿ ತೆರೆಯುತ್ತದೆ
ಆ ದಾರಿಯಲ್ಲಿ
ನಡೆಯಬೇಕು ಅಷ್ಟೇ!
ಆದ್ರೆ ಬಹುತೇಕ ಜನರಿಗೆ
ದಾರಿ ಕಾಣುವುದಿಲ್ಲ
ಕಾರಣ ಅಜ್ಞಾನ.....

ಕಷ್ಟಗಳು ಮೇಲಿಂದ ಮೇಲೆ
ಕಾಡುವಾಗ ದೃತಿಗೆಡದೆ
ಮುನ್ನೆಡೆಯಬೇಕು
ಇಲ್ಲದಿದ್ದರೆ ಕಷ್ಟಗಳು
ನಮ್ಮನ್ನು ದುಃಖದಲ್ಲಿ ಮುಳುಗಿಸುತ್ತವೆ........

ಸುಖವು ಸದಾ ನಮ್ಮ ಜೊತೆ ಇರಬೇಕು ಅಂದರೆ,
ನಾವು ನಮ್ಮ ಮನಸ್ಸನ್ನು
ಶುದ್ಧವಾಗಿ ಇಟ್ಟುಕೊಳ್ಳಬೇಕು
ಇಲ್ಲದಿದ್ದರೆ ನೀರಿನ ಮೇಲಿನ ಗುಳ್ಳೆಯಂತೆ ಸುಖವು ಬಹುಬೇಗ ಮಾಯವಾಗುತ್ತದೆ......

ಸುಖ ಸಂತೋಷಕ್ಕೆ
ಅತೋರೆಯುವ ಮನ
ಮನಸಿನ ಕೃಷಿಗೆ ಮುಂದಾಗದಿರುವುದು
ಅಸವಗಳಿಗೆ ಅಂಟಿಕೊಂಡಿರುವುದು
ದುಃಖಕ್ಕೆ ಕಾರಣ......

ಡಾ II ನಾಗೇಶ್ ಮೌರ್ಯ
9743907399

- ಡಾ ನಾಗೇಶ ಮೌರ್ಯ

02 Jun 2025, 12:26 pm
Download App from Playstore: