ನಿನ್ನ ಬರುವಿಕೆಗಾಗಿ

ನಿಗಿ ನಿಗಿ ಎಂದು ಬೆಂಕಿಯಯಂತೆ ಕಂಗೊಳಿಸುವ
ಗುಲ್ ಮೋಹರ್ ಹೂ
ಬಿಟ್ಟಿರುವ ಮರಗಳ ಸಾಲು

ನೀಲಾಕಾಶದಲಿ ತೆಲಾಡುವ
ಕಪ್ಪನೆಯ ಮೋಡಗಳು
ಹಿಮಾರಾಶಿಯನು ಹೊದ್ದು ಮಲಗಿರುವ ಪರ್ವತಗಳು

ನವಗ್ರಹದೊಳಗಿನ ಅಷ್ಟಾಂಗ ಸುಂದರಿಯರು
ಪಂಚಶೀಲಾದೊಂದಿಗೆ ವ್ರತ
ಕೈಗೊಂಡು
ದಶ ಪಾರಾಮಿತಗಳನ್ನು ಪೂರೈಸಿ
ಸರದಿ ಸಾಲಿನಲಿ ಕಾಯುತ್ತಿದ್ದಾರೆ
ನಿನ್ನ ಬರುವಿಕೆಗಾಗಿ......

ಡಾ ನಾಗೇಶ್ ಮೌರ್ಯ
9743907399

- ಡಾ ನಾಗೇಶ ಮೌರ್ಯ

09 Jun 2025, 05:15 pm
Download App from Playstore: