ಅಪ್ಪ

ನೀನೊಂದು ನಿಲುಕದ ನಕ್ಷತ್ರ
ಯಾರಿಗೂ ಗೋಚರವಾಗದ ತ್ಯಾಗಮಯಿ
ನೀ ತಿಳಿಸಿಕೊಟ್ಟೆ ಬದುಕು ನಡೆಸುವ ಕ್ರಮ ನಿಸ್ವಾರ್ಥ ಬದುಕಿನ ಜನಕ ಸಂಯಮದ ಸೂರ.

ಸೈನಿಕರಂತೆ ನನ್ನ ರಕ್ಷಕ
ಸಿಪಾಯಿಯಂತೆ ಕಾಯಕಯೋಗಿ
ನನಗಾಗಿ ಕರಗುವ
ನಿನ್ನ ಮನ ಮಂಜಿನ ಗಿರಿ.

ಕನಸಿನಲಿ ಬಂದು
ಮನಸಲ್ಲಿ ನಿಂತು
ನಕ್ಕು ನಗಿಸುತಾ ಹೆಗಲ ಮೇಲೆ ಹೊತ್ತು
ಊರು ಸುತ್ತಿಸಿದ ಮಹಾನಾಯಕ.

ಜೀವನದಿದ್ದಕ್ಕೂ ನೊಂದು ಬೆಂದು ನಗುಮೊಗದಿಂದ ಎಲ್ಲವ ಸ್ವೀಕರಿಸಿ ಕತ್ತೇತ್ತಿ ನೋಡದೆ ಜವಾಬ್ದಾರಿಯನ್ನು ಹೊತ್ತು ಬದುಕ ನಡೆಸಿದವನಲ್ಲವೇ ನನ್ನ ಅಪ್ಪ.


✍️ಮೇಘಾ ಬೆಳಧಡಿ

- ಮೇಘಾ ಬೆಳಧಡಿ

16 Jun 2025, 01:14 pm
Download App from Playstore: