ನಿನ್ನಂತೆ ಮೌನವಾಗಬೇಕು ಬುದ್ಧ.......!

ನಿನ್ನಂತೆ ಮೌನವಾಗಬೇಕು ಬುದ್ಧ.......!

ಚಂಗನೆ ಗಾಳಿಯಲಿ
ತೂರಿ ಬಂದವು
ಅಣುಬಾಂಬುಗಳು ಮಿಸೈಲ್ಗಳು
ಮನುಷ್ಯರನ್ನು ಹುಡುಕುಡುಕಿ ಕೊಲ್ಲುತ್ತಿವೆ.....
ಒಣಪ್ರತಿಷ್ಠೆ ಹುಂಬತನ
ಮನದಲಿ ತುಂಬಿದೆ
ಎಲ್ಲೆಡೆ ಸಾವಿನ ಆಕ್ರಂದನ
ಮುಗಿಲು ಮುಟ್ಟಿದೆ
ಯುದ್ಧದಾಹಿಗಳಿಗಾ
ನಿನ್ನಂತೆ ಮೌನವಾಗಬೇಕು ಬುದ್ಧ.......!

ಕಟ್ಟಡಗಳು ಉರುಳಿದವು
ಕನಸ್ಸುಗಳು ಭಗ್ನಗೊಂಡವು
ಶಾಂತಿಯ ಜೀವನ ಕೋಲಾಹಲಗೊಂಡಿದೆ
ಕಣ್ಣು ಮುಚ್ಚಿ ನಿದ್ದೆ ಮಾಡಲಾಗುತ್ತಿಲ್ಲ
ಸತ್ತವರೆದುರಲ್ಲಿ ಅನ್ನ ಹೇಗೆ ಉಣ್ಣಲಿ
ನಿಟ್ಟುಸಿರಲಿ ಸುಮ್ಮನೇಕೆ ಕೂರಲಿ
ಕೇಳುತ್ತೇನೆ ಅವರಿಗೆ
ನೀವು ಮನುಷ್ಯರೇ?
ನಿಮ್ಮಿಬ್ಬರ ತೆವಲಿಗೆ ನಮಗೇಕೆ ಶಿಕ್ಷೆ?
ಪ್ರಶ್ನಿಸಲೇ ಬೇಕು ನಿನ್ನಂತಯೇ
ಬುದ್ಧ..........!

ಡಾ ನಾಗೇಶ್ ಮೌರ್ಯ
9743907399

- ಡಾ ನಾಗೇಶ ಮೌರ್ಯ

16 Jun 2025, 05:28 pm
Download App from Playstore: