ಆತ್ಮೀಯ ಸ್ನೇಹ..
ಹೃದಯ ತೋಟದಲ್ಲಿ ಅಯಸ್ಕಾಂತದಂತೆ,
ಬಿಡದೆ ನೆಲೆಸುವುದು ಸ್ನೇಹ.
ನೆನಪಾದಾಗ ತುಟಿ ಅಂಚಲಿ ನಗೆ ತರುವುದು ಮರೆಸಿ ವಿರಹ.
ಮಾತಿರದ ಕ್ಷಣ ಆವರಿಸಿ ಹೃದಯವನ್ನ,
ಸವಾಲುಗಳಿಗೆ ಸಂಜೀವಿನಿಯಾಗಿ,
ಪ್ರೋತ್ಸಾಹಿಸುತ್ತೆ ಆಲೋಚನೆಗಳನ್ನ.
ಹತ್ತಿರ ಸುಳಿದಾಗ ಆಡುವ ಮುತ್ತಂತ ಮಾತುಗಳು,
ಆಶ್ರಯದ ಗುಡಿಯೊಳಗೆ ಕೈ ಬಿಡೆನೆಂಬ ಘೋಷಣೆಯಲ್ಲಿ ಬೆರೆತ ಭಾವಗಳು.
ಅಂತರಂಗದ ಒಡಲೊಳಗೆ,
ಅಪರಂಜಿಯಂತೆ ಹೊಳೆಯುವ ಬಾಂಧವ್ಯ,
ಕರಗದು, ತಣ್ಣಗಾದ ದೇಹ ಇಳಯ ಮಡಿಲೊಳಗೆ ಇಳಿದು ಭಸ್ಮವಾಗುವ ತನಕ.
ಕಾರಣಗಳ ಸುಳಿ ಎದ್ದು ಅಬ್ಬರಿಸಿದರೆ,
ಎದೆಯೊಳಿರುವ ಜೀವ ಅಳಿ ತಪ್ಪಿ ನರಳುವುದು.
ವೊಮ್ಮನಸ ಪ್ರೀತಿಎದು,
ಅಗಲಿಕೆಯ ನಿಪವಿರದು,
ಕಾಲ ಸರಿಸಿ ಜೀವಿಸದ ಮೌನಗೀತೆಯದು.
ತಿರುಕನ ಕನಸಂತೆ ಮೆರೆದು ಮುರಿಯುವುದಿಲ್ಲ,
ಖಾತ್ರಿಯಾದ ಮೇಲೆ ಬಾಳು ಸವಿಬೆಲ್ಲ.
ಗೊಂದಲ ವಿರದ ಸ್ನೇಹ ಕೊಡುವುದು ಜೊತೆ ಸಾಗುವೆನೆಂಬ ಪ್ರಮಾಣ,
ಇದ್ದಾಗ, ಬೇಡದೆ ಸಿಗುವ ಸಮಾಧಾನ ಶ್ರೇಷ್ಠ.
ಮೇಘದ ಹನಿಗಳಿಂದ ಮನ ತಂಪಾದಂತೆ,
ಕೊನೆ ಆಸೆಯಲು ನೀರುಣಿಸಿ,
ಸ್ವರ್ಗಕ್ಕೆ ಡಾರಿ ತೋರುವುದು
ಆತ್ಮೀಯ ಸ್ನೇಹ.
- nagamani Kanaka
16 Jun 2025, 09:59 pm
Download App from Playstore: