ನನ್ನವರು
ನನ್ನವರೆಂದರೆ
ನಾ ತಿಳಿದೇ
ಭಾವನೆಗಳ ಬೆಸೆಯುವ
ಸಿಹಿ ಜೇನು
ಜೇನ್ನೋಣಗಳ ಅಟ್ಟಹಾಸ ಅರಿಯಲಿಲ್ಲ.
ನನ್ನವರೆಂದರೆ
ನಾ ತಿಳಿದೇ
ನನ್ನಯ ಪ್ರಪಂಚವೆಂದು
ವಿಕೃಪ ಮನಸ್ಸುಗಳು ಪರಿವಿಗೆಯಿರಲಿಲ್ಲ.
ನನ್ನವರೆಂದರೆ
ನಾ ತಿಳಿದೇ
ಶುದ್ಧ ವಾಯುವೆಂದು
ಮಲೀನತೆಯನು ತಿಳಿಯಲಿಲ್ಲ.
ನನ್ನವರೆಂದರೆ
ನಾ ತಿಳಿದೆ
ಹೃದಯದ ಬಡಿತವೆಂದು
ನಿಷ್ಠುರ ಮನಸ್ಸುಗಳ ಲೆಕ್ಕಾಚಾರವಿರಲಿಲ್ಲ
ನಾನು ನನ್ನವರೆಂದು ಬಿಟ್ಟು
ಸ್ವಾರ್ಥಿ ಆಗಬೇಕಿದೆ
ಪರರು ಕಲಿಸಿದ ಪಾಠವಿದಲ್ಲವೇ
ಕರ್ಮವೂ ಯಾರನ್ನೂ ಬಿಡದ ನಂಟ.
✍️ಮೇಘಾ ಬೆಳಧಡಿ
- ಮೇಘಾ ಬೆಳಧಡಿ
17 Jun 2025, 11:38 am
Download App from Playstore: