ಯೋಗಭ್ಯಾಸ..
ಧೂಪದಂತೆ ಹರಡಿದೆ ಕಡಲಾಚೆ ಯೋಗವು,
ಜನರ ತನು ಮನವ ಕೂಡಿಸೋ ಕಾರ್ಯತಂತ್ರವೂ.
ಪತಂಜಲಿ ಯೋಗಶಾಸ್ತ್ರ ಬಾಳಿಗಾಸ್ತ್ರವು,
ಬಾಲ್ಯದಲ್ಲೇ ವ್ಯಾಯಾಮದ ಬಿತ್ತೋ ಬೀಜ ಶಸ್ತ್ರವು.
ಆರಂಭದ ಅಭ್ಯಾಸ ಸಂಕಲ್ಪ ಮಾಡಲಿ,
ಉತ್ತಮ ಆರೋಗ್ಯಕೆ ಸೂರ್ಯ ನಮಸ್ಕಾರವಿರಲಿ.
ಒತ್ತಡಗಳ ಭಾರವಿಳಿಸಿ ಶಾಂತಿ ತರುವುದು,
ನೆತ್ತರಿನ ಪಾಚಿ ಕಳಚಿ ಶುದ್ಧಗೊಳಿಸುವುದು.
ಪ್ರಾಣಾಯಾಮ, ಧ್ಯಾನವನ್ನು ಮನುಜ ಮಾಡಬೇಕಿದೆ,
ಸದೃಢತೆಯ ಚೈತನ್ಯವು ಅದರ ಲಡಗಿದೆ.
ನಾನೇನು ಎಂಬ ಅರಿವ ಮೌನ ಕೊಡುವುದು,
ಏಕಾಗ್ರತೆ ನೆಲೆಸಿ ಗ್ರಹಿಕೆ ಮೊಳಕೆಯೊಡೆವುದು.
ಆಲಸ್ಯವ ದೂರ ಸರಿಸಿ ಮುಂಜಾವಿನಲಿ,
ಸರ್ವಶಕ್ತಿ ಪಡೆಯಬಹುದು ಯೋಗ ಮಾಡುತ್ತಲಿ.
- nagamani Kanaka
21 Jun 2025, 09:06 pm
Download App from Playstore: